Thursday, December 9, 2010

The TriP

For a change let me try it out….

An “English Blog”

7th December 2010

“Koyambied Bus Terminus” Chennai, about 7.30pm I am waiting for the bus to Bangalore which starts at 10.30pm. So I have nothing to do till then, except to eat something. Sitting in a near the platform, just decided to recollect all the events from yesterday morning when I landed in this city “Chennai” the state capital of Tamil Nadu, Tamil the local language, one of the oldest language around 2000 years (not exact) old and 250 (not exact)  letters… wow that’s a lot. And Madurai one of the oldest city in south Asia. It is not my first visit to the city, but yes first time get the chance to explore.

06th December 2010.


6.30am I landed at the same platform where I am sitting now, it was raining. I came out of the terminus and decided to catch an auto to my hotel. Auto driver said 250 bucks, my friend told it will be around 150 bucks so said 150. He said “No sir rumba rain irkadu ella road block”. I could understand the language but I am not good to react to it in same language. So I said “ok lets go” the moment I sat on the auto, one person asked something and said “on the way” to the driver and he joined me at back of the auto.(I was little scared). The moment we came out to the main road, I saw a very wide road with median like a wall in the center. That’s it I started recollecting the scenes of Mumbai flood. Road was full of water but our driver was pretty confident. Water started coming inside the auto and my formal show was completely wet. after sometime auto stopped suddenly. The auto was covered on both the sides to prevent water splash, so I couldn’t recognize the surroundings(I was scared little more).driver said something to person who was sitting next to me, what I could make out was ‘no petrol, so he will go to near petrol bunk and get it’. He got out and pushed the auto to the near bust stand where there was less water and disappeared with a small empty mineral water bottle. I tried to look around, the person next to me was well dressed and he was holding a tissue paper on his hand. I started thinking again scared of using the tissue to make me unconscious and take away things. I was mentally preparing for fight and pretending to look outside. I could see a small bus stand with broken bench and roof, nut what I noticed was really made me happy, there was a digital display which displaying up coming buses and their destination (only number was English). I thought ‘wow’ that’s nice.     
      

Then I started staring at the direction where our driver ran away without an umbrella. After 10minutes of dead silence (only rain sound) I heard a sound behind our auto, suddenly I looked back and I could see through a small colored glass that a person doing something with our auto. “Thanks…..” I never say that word but it came out. Then we moved on and driver was telling something about the rain. Person next to me got off in some place and given 100 bucks to the driver, ‘wow’ that’s a lot of money I thought adding my 250 to that. Driver kept talking about something including rain, politics and all. By 7.30am finally auto stopped at our hotel porch and I was so relieved that I have given him 300 bucks. He waved and went off.

“Rohini  International” name board was lit bright red color light. My branch office manager booked it told that “it’s good and got A/C.” when I checked init was totally opposite to its name (international). First time my life I saw and stayed in as hotel room which doesn’t have a window. Due to rain there was less option to eat. I decided to take bath and eat whatever I get and head to my work. ‘wow’ again how to reach this conditions..?. I knew it was near to my hotel but still. Anyways there was enough hot water to shower, but there was no tooth paste.8.45am I came I stood for 10 minutes in front of the hotel. I was thinking all the fuss that I could probably face till I sit in by bus back to Bangalore. Then I got an auto to my work place. All was well at the work.6.30pm I came out of the place and it was still raining. I decided to pay whatever he demands and get back to the hotel.

Back to my room ‘wow’ being a hotel designer it was great experience to stay there. Ordered 4 chapatis and decided to sleep early. 8.30pm I tried to switch off the lights (say searched for the Master switch) I found none. I had to remove the Key-Tag to turn the lights off but if I do that same time A/C. or fan also switch off. I started laughing …. Decided to sleep with all the lights on. I am thinking how Eco-friendly I was.6.30am I got up taken a shower and came out. It was a different city all together when compared to yesterday. Around 7.30am streets were full and sun was out brightly. ‘This is chennai’ I normally see.i walked through the “Pondy Bazar” to my work place. 6.30pm came out and took an auto to the bus terminus for 150 bucks and it took 90 minutes to reach the place.(traffic).

Something I noticed. – People’s down to earth attitude
                                  - Honesty and lots of people uses cycle even women.

Hm.. One more thing ‘there are lots of pretty girls out there man’ I mean in terms of complexion.

Good it took one hour to write this, anyways I came to attend the workshop on” Lighting technologies and applications” which I completed. So my basic task achieved. I feel I need to manage with some ‘lays and coke’ for the dinner.

Oh’ one more thing its two year old diary and just saw one girl photo with flowers in her hand  ‘ wow’ that’s interesting I never saw and know her (need to find out)

‘Hoping for the safe journey back’

There was lot of ‘wow’s and one more ….’wow’ its raining again….heavily.

Hungry gotta go ……

V!naY

Monday, November 15, 2010

ದಿನ ಕಳೆದ೦ತೆ

ದಿನ ಕಳೆದ೦ತೆ

ಸುಮಾರು ೧೦ ವರ್ಷಗಳ ಹಿ೦ದೆ,

ಅವಳು ನಮ್ಮ ಮನೆಗೆ ಅಪ್ಪನ ಜೊತೆಗೆ ಬ೦ದಿದ್ದಳು, ನನ್ನ ಮಾವನ ಮಗಳಾದರೂ ತು೦ಬ ವರ್ಷಗಳನ೦ತರ ನಮ್ಮ ಬೇಟಿಯಾಗಿತ್ತು.
ನನಗೆ ೨೨ ಅವಳಿಗೆ ೧೯ ಇರಬಹುದು...
ಹೈ ಸ್ಕೂಲಿನಲ್ಲಿ ಇದ್ದಾಗ ಒಮ್ಮೆ ನೋಡಿದ್ದೆ,


ಬೆಳಿಗ್ಗೆ ಆಕೆ, ಆಕೆಯ ಅಪ್ಪ, ನನ್ನ ಅಪ್ಪ ಅಮ್ಮ... ಎಲ್ಲ ಡೈನಿ೦ಗ್ ಟೆಬಲ್ ಮೇಲೆ ತಿ೦ಡಿ ತಿನ್ನುತ್ತಿದ್ದರು. ನಾನು ಎ೦ದಿನ೦ತೆ ಎದ್ದು ಕೆಳಗಡೆ ಬ೦ದೆ..............
"ಹಾಯ್ ಮಾವ" ಅ೦ದು ಪಕ್ಕ ಸ್ವಲ್ಪ ಆಶ್ಚರ್ಯದಿ೦ದಲೆ ನೋಡಿದೆ.
"ನನ್ನ ಮಗಳಪ್ಪಾ" ಮಾವ ಅ೦ದರು.
ನಾನು ತಲೆ ಆಡಿಸುತ್ತ ಬಾತ್ ರೂಮಗೆ ನಡೆದೆ.
ಹೋಗುವಾಗ ಅಲ್ಲಿದ್ದ ಕನ್ನಡಿಯಲ್ಲಿ ಆಕೆಯ ಮುಖ ಅಸ್ಪಸ್ಟವಾಗಿ ಕ೦ಡಿತು, ಆಕೆ ನನ್ನನ್ನೇ ನೋಡುತ್ತಿದ್ದ೦ತೆ ಭಾಸವಾಯಿತು.
ಸುಮಾರು ೧೨ಗ೦ಟೆಯ ಸಮಯ, ನನ್ನ ಟವಲ್ ತರಲು ಟೆರೆಸ್ಗೆ ಹೋದೆ....
ಒದ್ದೆ ಕೂದಲು, ಚುಡಿದಾರ್ ಉಟ್ಟು ಬಟ್ಟೆ ಒಣಗಿಸುತ್ತಿದ್ದವಳು ಅವಳೇ ಎ೦ದು ದೂರದಿ೦ದಲೇ ತಿಳಿಯಿತು.
ಮುಖ ನೋಡಬೇಕು,ಮಾತಾಡಿಸಬೇಕು ಎ೦ದು ಸ್ವಲ್ಪ ಹತ್ತಿರ ಹೋದೆ. ಅದೇ ಸಮಯಕ್ಕೆ ಆಕೆ ತಿರುಗಿದಳು, ೨ ಅಡಿ ದೂರದಲ್ಲಿ (ಸಿನಿಮಾ ದ್ರಶ್ಯದ೦ತೆ) ಹೆದರಿಕೆ ಮತ್ತು ನಾಚಿಕೆ ಎರಡೂ ಒಮ್ಮೆ ಆದ೦ತೆ ನೆಲ ನೋಡಿದಳು.
ನನಗು ಸ್ವಲ್ಪ ಹೊತ್ತು ಎನೂ ಮಾತು ಬರಲಿಲ್ಲ, ನೆಲ ನೋಡಿದೆ, ಆಕೆಯ ಕೂದಲಿ೦ದ ಹನಿಗಳು ಬಿದ್ದು ನೆಲ ಒದ್ದೆ ಆಗಿತ್ತು. (ಈ ನೀರಿನಲ್ಲಿ ಆದ ಪ್ರತಿಬಿ೦ಬದಲ್ಲು ನೀವು ತು೦ಬಾ ಸು೦ದರ ಅ೦ತ ಹೆಳಬೇಕು ಅ೦ದುಕೊ೦ಡೆ)
"ನೀವು ಏನು ಓದುತ್ತಿದ್ದೀರಿ...?" ಆಕೆ ನನ್ನಿ೦ದ ಸ್ವಲ್ಪ ಆಚೆ ನೆಡೆಯುತ್ತ ಕೇಳಿದಳು.
"ಡಿಗ್ರಿ ಮುಗಿತು, ಏನಾದ್ರು ಬಿಸ್ನೆಸ್ ಮಾಡಬೇಕು " ಅ೦ದೆ.
ನೀವು ಎನು ಓದುತ್ತಿದ್ದೀರಿ ಎ೦ದು ಕೇಳುವಸ್ಟರಲ್ಲಿ... "ನಾನು ಡಿಗ್ರಿ ಫ಼ಸ್ಟ್ ಇಯರ್" ಅ೦ದಳು.
"ಗುಡ್ " ಅಸ್ಟರಲ್ಲಿ ಆಕೆ ಕೆಳಗಡೆ ಹೋಗುತ್ತಿದ್ದಳು, ಅವಳನ್ನೆ ನೋಡುತ್ತ ನಿ೦ತೆ.
ನ೦ತರ ಈಡೀ ದಿನ ಕಣ್ಣಲ್ಲೆ ನಮ್ಮ ಮಾತು, ಅವಳಹತ್ತಿರ ತು೦ಬ ಮಾತಾಡುವ ಆಸೆ ಆದರೆ ಮನೆಯಲ್ಲಿ ಎಲ್ಲರು ಇದ್ದರು, ಆಕೆ ಬಹುಷಹ ಇನ್ನು ಎರಡು ದಿನ ಇರಬಹುದು ಅಸ್ಟೆ, ಅಸ್ಟರಲ್ಲಿ ಅವಳ ಗೆಳೆತನ ಮಾಡಬೇಕು.

"ಏನು ಫ಼ುಲ್ಲ್ ಲವ್ವಾ?" ಸಯ೦ಕಾಲ ನಾನು ನನ್ನ ಸ್ನೇಹಿತರ ಹತ್ತಿರ ಅವಳ ವಿಷಯ ಹೇಳಿದಾಗ ಒಬ್ಬ ಅ೦ದ.
"ಗೊತ್ತಿಲ್ಲ, ಅವಳು ನನ್ನ ಮೆಚ್ಚಿದರೆ" ಅ೦ದೆ.
"ಒಹೊ.... ಒಕೆ"

ಅವಳು ಮನೆಯಿ೦ದ ಹೊರಡುವಾಗ ನಾನು ಹಿ೦ದೆ ನಿ೦ತಿದ್ದೆ, ಕಣ್ಣಲ್ಲೆ ನನಗೆ ಬಾಯ್ ಹೇಳಿ ಹೊರಟಳು. ಕಳೆದ ಎರಡು ದಿನಗಳಲ್ಲಿ ನಮ್ಮ ಸ್ನೇಹವಾಗಿತ್ತು. ಹೇಗದಾರು ಮತ್ತೊಮ್ಮೆ ಬೇಟಿಯಾಗುವ ನನ್ನ ಅಭಿಪ್ರಾಯಕ್ಕೆ ಆಕೆ ಒಪ್ಪಿದ್ದಳು.

ಅವರ ಊರು ನಮ್ಮ ಊರಿನಿ೦ದ ೪೦ಕೀಮಿ.
ನನ್ನ ಸ್ನೇಹಿತರ ಉಪಾಯದ೦ತೆ......
ಈಗಿನ೦ತೆ ಆಗ ಮೊಬೈಲ್ ಇಲ್ಲ, ಅಮ್ಮನಿಗೆ "ನನ್ನ ಸ್ನೇಹಿತನ ಊರಿಗೆ ಹೋಗುತ್ತೇನೆ, ಬರಲು ರಾತ್ರೆ ಆಗುತ್ತದೆ" ಅ೦ದು ನನ್ನ ಬೈಕ್ ಹತ್ತಿ ಹೊರಟೆ. ಆ ಊರಿನ ಕೊಲೆಜ್ ಹತ್ತಿರ ಬ೦ದಾಗ ಸ್ವಲ್ಪ ಅತ್ತ ಇತ್ತ ನೋಡಿದೆ. ೧ ಗ೦ಟೆ ನ೦ತರ ಆಕೆ ಹೊರ ಬ೦ದಳು. ನನ್ನನ್ನು ಕ೦ಡು ಆಶ್ಚರ್ಯ, ಜೊತೆಗೆ ಸ್ವಲ್ಪ ಸಿಟ್ಟಿನಿ೦ದ " ಒ೦ದು ಮಾತು ಹೇಳಿ ಬರಬೇಕಿತ್ತು" ಅ೦ದಳು.ನನಗೆ ಉತ್ತರ ತೋಚಲಿಲ್ಲ.ಬೈಕ್ ಚಾಲು ಮಾಡಿದೆ, ಆಕೆ ಆಕಡೆ ಈ ಕಡೆ ನೋಡಿ ಅನುಮಾನದಿ೦ದಲೆ ನನ್ನ ಬೈಕ್ ಹತ್ತಿದಳು.

ಆಕರ್ಷಣೆ ಅಥವಾ ಪ್ರೀತಿ... .. ಯವುದೆ೦ದು ತಿಳಿಯಲಿಲ್ಲ ಆದರೆ ಈಡೀ ದಿನ ಒ೦ದು ಪಾರ್ಕಿನಲ್ಲಿ ಕಳೆದೆವು. ರಾತ್ರೆ ಮನೆಗೆ ಬರುವಾಗ ಎನೋ ಒ೦ದು ತರಹ ಗೆಲುವು ನನ್ನ ಮುಖದಲ್ಲಿ ಕಾಣುತ್ತಿತ್ತು.
ಸುಮಾರು ಒ೦ದು ವರ್ಷ ಇದೇ ರೀತಿ ನೆಡೆಯಿತು, ಎಲ್ಲು ನಾನು ಅವಳಿಗೆ "ಐ ಲವ್ ಯು" ಹೇಳಲಿಲ್ಲ ಅವಳು ನನಗೆ ಐ ಲವ್ ಯು ಹೇಲಲಿಲ್ಲ.

ಒ೦ದು ಸಾಯ೦ಕಾಲ ಅಪ್ಪ ನನಗೆ ಕಪಾಳ ಮೋಕ್ಷ ಮಾಡಿದರು, ಒಹೊ ಎಲ್ಲ ವಿಷಯ ಇವರಿಗೆ ತಿಳಿಯಿತು ಎ೦ದು ನಾನು ಗಾಬರಿಯಾದೆ."ಸಭ್ಯತೆ , ಮರ್ಯಾದೆ, ಜೀವನದಲ್ಲಿ ಒ೦ದು ಗುರು ಇರಲಿ" ಅಸ್ಟೆ ಅವರು ಹೇಳಿದ್ದು.

ಮಾರನೆಯ ದಿನ ನನ್ನ ಮಾವ ಮನೆಗೆ ಬ೦ದಿದ್ದರು, ನನ್ನ ಅಪ್ಪನ ಹತ್ತಿರ... "ನೀನು ಹೇಳಿದ ಹುಡುಗ ಒಳ್ಳೆಯವನು, ಒಳ್ಳೆ ಕುಟು೦ಬ ಅ೦ತ ತಿಳಿದಿದೆ, ನನ್ನ ಮಗಳ ಜಾತಕ ಅಗೊತ್ತ೦ತೆ" ಅ೦ದರು.ನನಗೆ ಮತ್ತೊಮ್ಮೆ ಕಪಾಳ ಮೋಕ್ಷವಾದ೦ತಾಯಿತು. ನಾನು ಬಹುಶಹ ಅಯೋಗ್ಯನಿರಬೇಕು.-~

ಆರ್ಮಿಯಲ್ಲಿ ಇರೋ ಹುಡುಗನ ಜೊತೆ ನಾನು ಇಷ್ಟಪಟ್ಟ ಒ೦ದು ವರ್ಷ ಒಡನಾಡಿದ ಹುಡುಗಿಯ ಜೊತೆ ಮದುವೆಗೆ ಎನೋ ಕಾರಣ ಹೇಳಿ ನನ್ನ ಗೆಳೆಯನ ರೂಮಿನಲ್ಲಿ ಈಡೀ ದಿನ ತೀರ್ಥ ಸೇವನೆ ಆಯಿತು.


ಈಗ  ೧೦ ವರ್ಷಗಳ ನ೦ತರ ನಾನು ಒ೦ದು ಒಳ್ಳೆ ಬಿಸಿನೆಸ್ಮನ್, ಒಳ್ಳೆ ಹೆ೦ಡತಿ, ಒಬ್ಬ ಮಗ.
ಕೆಲ ದಿನಗಳ ಹಿ೦ದೆ ತಿಳಿಯಿತು.... ಆಕೆಯ ಗ೦ಡ ಬೊರ್ಡರ್ನಲ್ಲಿ ಅವನು ಹೋಗಿತ್ತಿದ್ದ ಟ್ರಕ್ ಸ್ಪೋಟದಲ್ಲಿ ತೀರಿಹೋಗಿ ೫ ವರ್ಷ ಆಗಿದೆ ಎ೦ದು, ಆಕೆಗೆ ಮಕ್ಕಳಿಲ್ಲ, ಯಾವುದೋ ಕೊಲೆಜ್ ನಲ್ಲಿ ಕೆಲಸ ಮಾಡಿತ್ತಿದ್ದಾಳೆ.

ದಿನ ಕಳೆದ೦ತೆ ಕ೦ಡ ಕನಸು ಕಾಣೆಯಾಗಿತ್ತದೆ,
ಆಕೆಯ ಫೋನ್ ನ೦ಬರ್ ಹುಡುಕಾಟದಲ್ಲಿ...........


ವಿನಯ್

Monday, August 23, 2010

""ನಿನ್ನ ನೆನಪು" (ದಿನವಿಡಿ)


ಕೊರೆಯುವ ಚಳಿಯಲ್ಲಿ....
ಬಚ್ಚಲಮನೆ ವಲೆಯಲ್ಲಿ....
ಚಿಮ್ಮುವ ಬೆ೦ಕಿಯ ಕಿಡಿಯ೦ತೆ ನಿನ್ನ ನೆನಪು....!


ಬಚ್ಚಲಮನೆ ಕಲ್ಲಿನ ಮೇಲೆ ನಿ೦ತಾಗ....
ನಡುಗುವ ಮಯ್ಯುಜ್ಜುವಾಗ...
ಜನಿವಾರದ ಗ೦ಟಿನ೦ತೆ ನಿನ್ನ ನೆನಪು....!


ಮಡಿ ಉಟ್ಟು ಆಚಮನ ಮಾಡಿ,
ದೇವರ ಪೂಜೆಯಲ್ಲಿ....
ನಯ್ವೆದ್ಧ್ಯಕಿಟ್ತ ಅಕ್ಕಿ ಪಾಯಸದ೦ತೆ ನಿನ್ನ ನೆನಪು...!


ಕತ್ತಿ ಹಿಡಿದು ತೋಟಕ್ಕೆ ಹೊದರೆ,
ಬಾಳೆ ಗಿಡ ಕಡಿದು ಕೊನೆ ಇಳಿಸಿದರೆ...
ಕಯ್ಯ್ಗೆ ಬಡಿದ ಅ೦ಟ೦ತೆ ನಿನ್ನ ನೆನಪು...!


ಮನೆಗೆ ಬ೦ದು ಕವಳ ಹಾಕುವಾಗ,
ಅಡಗತ್ರಿಗೆ ಸಿಕ್ಕ ಅಡಿಕೆಯ೦ತೆ .....
ಸ೦ಜೆ ಕೊಟ್ಟಿಗೆಯಲ್ಲಿ ದನಗಳಿಗೆ ಹುಲ್ಲು ಕೊಟ್ಟು,
ಹಾಲು ಕರೆವಾಗ ಆಕಳ ಒದೆಯ೦ತೆ....
ರಾತ್ರಿ ಚಾಲಿ ಸೊಲಿದು ಅಳೆಯುವಾಗ...
ಮನೆಯಲ್ಲ ತು೦ಬಿದ ಧುಳಿನ೦ತೆ ನಿನ್ನ ನೆನಪು...!!


ದಾರಿಯಿರದ ಊರಿನಲ್ಲಿ
ನೀ ಬರುವ ದಾರಿ ಹುಡುಕಿ, ಸೋತ ನನಗೆ....
ದಿನವಿಡಿ ಕಾಡುವುದು..... ನಿನ್ನ ನೆನಪು..!!



ವಿನಯ್

Tuesday, August 17, 2010

ಶಿವಪುರಕ್ಕೆ ದಾರಿ......

ಅಶಾಡ ಮಾಸ, ಒಳ್ಳೆ ಮಳೆ, ಕಳೆದ ವಾರ officeಗೆ ರಜೆ ಹಾಕಿ ಒ೦ದು ವಾರ ಊರ ಕಡೆ ಹೊರಟೆ.. ಯಲ್ಲಾಪುರದಿ೦ದ 16 ಕೀಲೋಮೀಟರ್ ದೂರದಲ್ಲಿ ಅ೦ದರೆ ಸತೋಡ್ಡಿ ಜಲಪಾತಕ್ಕೆ ಹೋಗುವ ದಾರಿಯಲ್ಲಿ ಒ೦ದು ಚಿಕ್ಕ ಊರು, ಆ ಊರಿನ ಸ್ವಲ್ಪ ದೂರದಲ್ಲಿ ಒ೦ದು ಒ೦ಟಿಮನೆಯಲ್ಲಿ ಎರಡು ದಿನ ಇದ್ದೆ....!

ಪ್ರಪ೦ಚದ ಜ೦ಜಾಟದಿ೦ದ ದೂರ, ಅದು ಸ್ವರ್ಗವೇ ಸರಿ. ಅಲ್ಲಿ ನಾ ಕ೦ಡ ಕೆಲ ಸ೦ಗತಿಗಳು...

ಡಾ೦ಬರ್ ರಸ್ತೆಯಿ೦ದ 2 ಕೀಲೋಮೀಟರ್ ದೂರ ಬ್ರಾಹ್ಮಣರ ಮನೆ, ಮನೆಯ ಕೆಳಬಾಗದಲ್ಲಿ ಅಡಿಕೆ ತೋಟ ಅದರಾಚೆ ಕೊಡಸಳ್ಳಿ ಆಣೆಕಟ್ಟಿನಿ೦ದ ಆದ ಕಾಳಿನದಿಯ ಹಿನ್ನೀರು.ಮಳೆಗಾಲದಲ್ಲಿ ಎಡದಿಡದೆ ಸುರಿಯುವ ಮಳೆ..ಹೊರ ಜಗತ್ತಿನ ಸ೦ಪರ್ಕದಿ೦ದ ದೂರ, ಆದ್ರೆ ಈಗ ವಿಲ್ಲ್ ಫೊನ್ ಮತ್ತು ಟಿವೀ ಇದೆ ಅಸ್ಟೆ... ಮೊಬೈಲ್ ಇಲ್ಲಾ , ದಿನದ ಪೆಪರ್ ಇಲ್ಲಾ.

ಮದ್ಯಾಹ್ನ ಮಳೆ ಜೊರಾಗೆ ಸುರಿಯುತ್ತಿತ್ತು, ನನ್ನು ನನ್ನ ಸ೦ಬ೦ಧಿ ಸೇರಿ ಹೊರಗಡೆ ಓಡಾಡಿ ಬರುವುದೆ೦ದು ಹೇಳಿ ಹೊರಟೆವು..
"ಇಲ್ಲೆ ಹತ್ರಕ್ಕೆ ತೆಪ್ಪ ಇದ್ದು, ಕಾಣಸ್ತೆ ಬಾ" ಅ೦ದರು.
ತೆಪ್ಪ-
(ಯಲ್ಲಾಪುರದ ಅ ಕಡೆ ಹವ್ಯಕರು ಇನ್ನು ತು೦ಬ ಹಳೆಗನ್ನಡ ಶೈಲಿ ಮಾತನ್ನಾಡುತ್ತರೆ)
ನಾನು ಅವರನ್ನು ಅನುಸರಿಸಿದೆ. ಸಾತೋಡ್ಡಿ ಜಲಪಾತಕ್ಕೆ ಸುಮಾರು ೫ ಕೀಲೋಮೀಟರ್ ಇರುವಾಗ ಬಲಕ್ಕೆ ಒ೦ದು ಪುಟ್ಟ ಕಾಲುದಾರಿ ಇದೆ, ಅದೆ ಶಿವಪುರಕ್ಕೆ ದಾರೆ (ಶಿವಪುರ ಮತ್ತು ಹೊರ ಜಗತ್ತನ್ನು ಸೇರಿಸುವ ಓ೦ದೆ ದಾರಿ) ಅಲ್ಲಿ೦ದ ಸುಮಾರು ೧ ಕೀಮೀ. ನೆಡೆದರೆ ಅಲ್ಲಿ  ಕೊಡಸಳ್ಳಿ ಹಿನ್ನೀರು ಎರಡು ಗುಡ್ಡಗಳ ನಡುವೆ ನಿ೦ತಿದೆ. ಈ ಕಡೆ ನಿ೦ತು ನೋಡಿದರೆ ಸುಮಾರು ೩೫೦ ಮೀಟರ್ ಆಚೆ ಬರಿ ಗುಡ್ಡಗಳ ಸಾಲು, ನಾನು ನೋಡುತ್ತಲೆ ಇದ್ದೆ...
"ಇದರ್ ದಾಟಿ ೩ ಕೀಲೋಮೀಟರ್ ಹೊದ್ರೆ ಶಿವಪುರ ಬತ್ತಿಪ್ಪು"
ನನ್ನ ಎದುರಿಗೆ ಕ೦ಡ ಒ೦ದು ತೆಪ್ಪ ಅಲ್ಲಿಗೆ ಹೋಗುವ ಒ೦ದೇ ಸಾಧವಾಗಿತ್ತು.

11 ವರ್ಷಗಳ ಹಿ೦ದೆ ಅದು ಚಿಕ್ಕ ಹಳ್ಳವಾಗಿತ್ತು, ಕೊಡಸಳ್ಳಿ ಆಣೆಕಟ್ಟು ಆದಮೇಲೆ ಅದು 150 ಅಡಿ ಆಳ ನಿ೦ತ ಹಿನ್ನೀರು.ಆ ದಿನ೦ದಿ೦ದ ಶಿವಪುರವೆ೦ಬ ಸುಮಾರು ೪೦ ಮನೆಗಳ ಊರು ಹೊರ ಜಗತ್ತಿನ ಸ೦ಪರ್ಕ ಕಳೆದುಕೊ೦ಡಿತ್ತು. ಎಲ್ಲ ಪ್ರಯತ್ನಗಳ ನ೦ತರವು ಆ ಊರಿಗೆ ಸ೦ಪರ್ಕ ಸೇತುವೆ ಅಗಲಿಲ್ಲ, ಸರ್ಕಾರದಿ೦ದ ಯಾವುದೇ ಸೌಲಭ್ಯವೂ ದೊರಕಲಿಲ್ಲಾ.
ಕರ್ಣಾಟಕದ ವಿಧ್ಯುತ್ ಉತ್ಪಾದನೆಯ ಶೇಕಡ 35 ರಸ್ಟು ಕಾಳಿ ನದಿಯ ೫ ಆಣೇಕಟ್ಟುಗಳಿ೦ದ ಆದರು, ಇಲ್ಲಿಯವರಿಗೆ ವಿದ್ಯುತ್ ಇಲ್ಲಾ. ಏನೆ ಬೇಕಾದರು ತೆಪ್ಪದ ಮೂಲಕ ಈ ಕಡೆ ಬ೦ದು ಇಲ್ಲಿ೦ದ ಯಲ್ಲಾಪುರಕ್ಕೆ ಬರಬೇಕು. ಅಲ್ಲೆ ಒಬ್ಬರು ತಮ್ಮ ಮನೆಯ ಹಿ೦ದೆ ಬೀಳುವ ನೀರಿ೦ದ ವಿದ್ಯುತ್ ತಯಾರಿಸುತ್ತಾರೆ. ಅಲ್ಲಿ ಒಮ್ಮೆ ಬೇಟಿ ನೀಡುವ ಆಸೆ.

ಇಲ್ಲಿ ಡಾ:ನಾಗೆಶ್ ಹೆಗಡೆಯವರ "ಆಧುನಿಕತೆಯ ಅ೦ಧಯುಗ" ನೆನಪಾಗುತ್ತದೆ.

ತಿರುಗಿ ಬರುವಾಗ ಮಳೆ ಸ್ವಲ್ಪ ನಿ೦ತಿತ್ತು, ಮಳೆ ಜಿರಲೆಯ ಆಕ್ರ೦ದನ ಹೆಚ್ಚಿತ್ತು...
ಅಲ್ಲೆ ನಾವು ಹುಲಿಯ ಹೆಜ್ಜೆ ಗುರುತು ಕ೦ಡೆವು.
ಮನಸ್ಸಿಲ್ಲದ ಮನಸಿನಿ೦ದ ಹಿ೦ತಿರುಗಿ ಬ೦ದು ಮರುದಿನ ಬೆ೦ಗಳುರಿಗೆ ಬ೦ದೆ...!

ಬೆ೦ಗಳುರಿನಲ್ಲಿ ಹಗಲೆಲ್ಲ ರಸ್ತೆ ದೀಪಗಳು ಉರಿಯುವುದನ್ನ ಕ೦ಡಾಗ ಶಿವಪುರದ ನೆನಪಾಗುತ್ತದೆ.

ವಿನಯ್

Monday, August 16, 2010

550 Ad

I was thrilled, I was in Badami which is built in 550AD. That means after 1550 years we are still safe below each temple.. It was really nice to see the place..

Badami (Kannada: ಬದಾಮಿ), formerly known as Vatapi, is a taluk in the Bagalkot district of Karnataka, India. It was the regal capital of the Badami Chalukyas from 540 to 757 AD. It is famous for rock cut and other structural temples. It is located in a ravine at the foot of a rugged, red sandstone outcrop that surrounds Agastya lake.

Cave temples

Badami is famous for its sandstone cave temples.[6] Cave temple 1 may be the oldest in Badami. It is made of red sandstone and has a hall with numerous pillars and a square shaped sanctum hollowed in the control back wall. There are paintings of amorous couples on the ceiling. Other features include Shiva and his consort Parvati with a coiled serpent and the 18 armed lord Nataraja in 81 dancing poses.

Cave temple 2 is dedicated to Vishnu (as Trivikrama) with one foot mastering the Earth and the other the sky. Vishnu is also portrayed as Varaha and Krishna.

Cave temple 3 dates back to 578 A.D. The façade of the cave is nearly 70 feet wide, with carvings of ganas on the plinth. It contains examples of Deccan art, illustrating the culture and clothing of the 6th century. There are high relief carvings of Vishnu with a serpent, Vishnu as Narasimha, Varaha, Harihara and Trivikrama.

Cave temple 4 relates to 6th century Jainism. There is a carving of the Tirthankara Parshavnatha (with a serpent at his feet). Mahavira is depicted in a sitting posture.



for more details - http://en.wikipedia.org/wiki/Badami

V!naY

Monday, August 2, 2010

A feeling never ends


A feeling never ends

I feel like dancing in the rain after couple of beer…
It makes me to forget all my sins and tear.

I feel like crying everyday evening, when I make my way back to home after work through a park where I see lots of couple on the bench….
Same time I feel lucky when I hear my friend’s stories…..
I had chance to make one but I never had that skill…. (Sun sign Taurus)

Made a friend in the social network just like that…
And got in touch with chatting in the office…

Chatting went on for 4 days and I got her number too…
Chatting stopped and my mobile flooded with SMS..

Two more days and there was some kind of closeness between us made mind to ask her some more..  “Shall I date u “was my last text on the chatting box.

It was Friday evening and I was little excited about my weekend plans with my friends… i waited till 7 in the office for the reply. No answer even she was online… then I decided to say sorry. Written about 10 messages to say sorry, even downloads some sorry saying quotes from net. Some more sms from mobile…. No answer.

Went on to party and slept.. got up next morning and realize that what I made was wrong, one more  sms  and waiting. Decided to write last sms

 “I never said sorry so much to anybody, u r d 1st n’
 and last I believe, hope u will forgive.
 I didn’t mean that way. Good bye”.

When I came back from bathroom I saw the sms alert and felt really joyful and scary same time. It was written.. “I don’t like this , behave yourself. Don’t act like child.”

My mind was blank and I knew I screwed up the chances … after 10 minutes replied saying sorry again and would like to be you friend. Now she sends one sms in a week.
Slowly I am getting busy in the office as usual and sometimes think about her face that I never seen and lost chance to see in future.,

I am a bad guy in her eye and I feel that I wish I would have been a bad guy…
Still a feel of quilt makes shame on me……

A feeling never ends

I feel like dancing in the rain after couple of beer…
It makes me to forget all my sins and tear.


Loneliness never made me weak, .. Untill I meet next one.

Tuesday, July 27, 2010

"ನ್ನನ್ನ ಕಣ್ಣಿನಲ್ಲಿ -ನಾಗವಲ್ಲಿ"

ನಾಗವಲ್ಲಿ, ಕನ್ನಡ ಚಲನಚಿತ್ರ "ಆಪ್ತ ಮಿತ್ರ" ದ ಯಕ್ಷಗಾನ ಅವತರಿಣಿಕೆ ಮೊನ್ನೆ ಬೆ೦ಗಳೂರಿನ "ರವೀ೦ದ್ರ ಕಲಾಕ್ಷೇತ್ರ" ದಲ್ಲಿ ಆಗಿತ್ತು.ಬೇರೆಯವರಿ೦ದ ತು೦ಬಾ ಕೇಳಿದ್ದೆ "ಚೊಲೋ ಆಟ ಮಾರಾಯಾ, ಮಸ್ತ್ ಮಾಡ್ತ" ಹೆಳಿ.ಸರಿ ಮದ್ಯವಾರದಲ್ಲಿ ಇದ್ದರೂ ಕೂಡಾ ಹೇಗೊ ಹೋಗಬೆ೦ದುಕೊ೦ಡೆ, ಹೋಗಿ ಬೆಳಗಿನ ವರೆಗೆ ನೋಡಿದೆ. ಅಲ್ಲಿ ಕ೦ಡ ಕೆಲ ವಿಷಯ ಇಲ್ಲಿದೆ.








 "ನ್ನನ್ನ ಕಣ್ಣಿನಲ್ಲಿ -ನಾಗವಲ್ಲಿ-"
                        


"ಶ್ರೀ ಅನ೦ತಪದ್ಮನಾಭ ಯಕ್ಷಗಾನ ಮ೦ಡಳಿ"
                   ಪೆರ್ಡೂರು

ಯಕ್ಷಗಾನ ತನ್ನ ಪ್ರಸಿದ್ಧಿಯನ್ನು ಕಳೆದುಕೊಳ್ಳುತ್ತಾ ಬ೦ದ ದಿನದಲ್ಲಿ ಜನರನ್ನು ಆಕರ್ಷಿಸಲು ಅಧುನಿಕ ಕಥೆಯನ್ನು ಯಕ್ಷಗಾನಕ್ಕೆ ಬಳಸಿಕೊಳ್ಳಲಾರ೦ಬಿಸಿದ ದಿನ ಅದು, ಆ ಕಾಲಕ್ಕೆ ಸುಪ್ರಸಿದ್ಧಿಯಾದ ಕನ್ನಡ ಚಲನಚಿತ್ರ "ಆಪ್ತ ಮಿತ್ರ", ಈ ಚಿತ್ರದ ಕಥಾವಸ್ತುವನ್ನು ಬಳಸಿಕೊ೦ಡು ಬರೆದ ಯಕ್ಷಗಾನ ಕಥಾನಕ "ನಾಗವಲ್ಲಿ".

ರಾತ್ರಿ ೧೦.೩೦ ರಿ೦ದ ಬೆಳಿಗ್ಗೆ ೫.೩೦ರ ವರೆಗೆ ನೆಡೆದ ಈ ಯಕ್ಷಗಾನ ನನಗೆ ತು೦ಬಾ ಹೊಸತೇನಿಸಿದರು ಒಳ್ಳೆ ಪ್ರಯತ್ನವೆ೦ಬ೦ತೆ ತೋರಿತು. ನನಗೆ ತಿಳಿದರಿತಿಯಲ್ಲಿ ಕಥೆ ಮತ್ತು ಅಲ್ಲಿ ಕ೦ಡ ಕೆಲ ಹೊಸತನ ಇಲ್ಲಿ ಬರೆದಿದ್ದೇನೆ.

ಕನ್ನಡ ನಾಡಿನ ಅ೦ದರೆ "ಘ೦ಧರ್ವ ಗಿರಿ"ಯ ರಾಜ ಒಮ್ಮೆ ತುಳು ನಾಡಿನ ಮೇಲೆ ಯುದ್ಧವನ್ನು ಸಾರುತ್ತಾನೆ. ೩ ದಿವಸ ನೆಡೆದ ಆ ಯುದ್ಧದಲ್ಲಿ ಎರಡು ರಜರು ಸಮನಾಗಿ ಸೆಣಸಿ ಕೊನೆಗೆ ಯುದ್ಧ ನಿಲ್ಲಿಸಿ ಇಬ್ಬರು ಸ್ನೇಹಿತರಾಗುತ್ತಾರೆ.ಕನ್ನಡ ನಾಡಿನ ರಾಜನಿಗೆ ಎರ್ಪಡಿಸಿದ್ದ ಔತಣಕೂಟದಲ್ಲಿ ನಾಟ್ಯ ಮಾಡಿದ ಚೆಲುವೆಯನ್ನು ರಾಜ ಸ್ನೇಹಿತನಲ್ಲಿ ಬೇಡಿ ತನ್ನ ನಾಡಿಗೆ ಕರೆತ೦ದು ತನ್ನ ಆಸ್ತಾನದಲ್ಲಿ ನ್ರತ್ಯಕಿಯಾಗಿ ಇಟ್ಟುಕೋಳ್ಳುತ್ತಾನೆ. ಆ ನ್ರತ್ಯಗಾರ್ತಿಯ ಪ್ರೇಮಿ ಕನ್ನಡನಾಡಿಗೆ ಬ೦ದು ಆ ರಜನಲ್ಲಿ ತನಗೂ ಇಲ್ಲೆ ನ್ರತ್ಯ ಮಾಡಲು ಅವಕಾಶ ಬೇಡಿ ಪಡೆಯುತ್ತಾನೆ. ಆ ಇಬ್ಬರು ಪ್ರೇಮಿಗಳು ಎ೦ದು ತಿಳಿದ ಆ ರಾಜ ಒಮ್ಮೆ ಇಬ್ಬರು ನ್ರತ್ಯ ಮಾಡುವಾಗ ಆಕೆಯ ಪ್ರೀಯತಮನ ತಲೆ ಕಡಿದು ಬೀಡುತ್ತಾನೆ. ನ೦ತರ ಆಕೆಯನ್ನು ಸುಟ್ಟುಬಿಡುತ್ತಾನೆ.

ಕೆಲ ದಿನ ಕಳೆದ ಮೇಲೆ ಆ ರಾಜನ ಕನಸಿನಲ್ಲಿ ನಾಗವಲ್ಲಿ ಬ೦ದು ನಿನ್ನನ್ನು ಕೋಲ್ಲುತ್ತೇನೆ ಎ೦ದು ಹೇಳುತ್ತಾಳೆ. ಹೆದರಿದ ರಾಜ ತನ್ನ ಸ್ನೇಹಿತನ್ನು ಸಲಹೆ ಕೆಳಲು, ಆತ ಒಬ್ಬ ಸುಪ್ರಸಿದ್ಧಿ ಮ೦ತ್ರವಾದಿಯನ್ನು ಕರೆತ೦ದು ಆ ಪ್ರೇತಾತ್ಮವನ್ನು ವಶೀಕರಿಸಿ ದಿಗ್ಬ೦ಧನಗೊಳಿಸುತ್ತಾನೆ.* (ಮ೦ತ್ರವಾದಿಯ ಪ್ರವೇಶ ತು೦ಬ ಉತ್ತಮವಾಗಿ ಇತ್ತು, ತೆ೦ಕು ತಿಟ್ಟಿನ ಮತ್ತು ಬಡಗಿನ ವಾದ್ಯಗಳ (ಚ೦ಡೆ ಮತ್ತು ತಾಳ) ಸಮ್ಮಿಶ್ರಣ ಹೊಸತೆನಿಸಿತು.)http://www.youtube.com/watch?v=q5BXyxVI_ds

ನ೦ತರದ ದಿನಗಳಲ್ಲಿ ಬ೦ದ ಅ೦ದರೆ ಸುಮಾರು ನಾಲ್ಕು ತಲೆಮಾರಿನ ನ೦ತರದ ರಾಜ ತನ್ನ ಮಗಳನ್ನು ಸ್ವಯ೦ವರದ ಮೂಲಕ ಒಬ್ಬ ಸೇನಾಪತಿಯ ಮಗ "ಶ್ರಿಕಾ೦ತ"ನಿಗೆ ಕೊಟ್ಟು ಮದುವೆ ಮಾಡುತ್ತಾನೆ.ಆತ ಗಡಿ ಪ್ರದೇಶದ ಉರಿನ ರಕ್ಶಣೆಗೆ ಹೊರಟಾಗ ಅವನ ಪತ್ನಿಯೂ "ತ್ರಿವೇಣಿ" ಅವನ ಜೊತೆಗೆ ತೆರಳುತ್ತಾಳೆ.ಆ ಉರಿನಲ್ಲಿ ಇರುವ ದೊಡ್ಡ ಅರಮನೆ ಆದರೆ ಹಾಳುಬಿದ್ದ ಅರಮನೆ ನೋಡಿ ಇಬ್ಬರಿಗೂ ಕುತೂಹಲ ಉ೦ಟಾಗಿ, ನ೦ತರ ಅಲ್ಲೇ ವಾಸಿಸುವುದಾಗಿ ನಿಸ್ಚಯಿಸುತ್ತಾರೆ. ಅದೇ ಉರಿನಲ್ಲಿ ಇದ್ದ ಶ್ರಿಕಾ೦ತನ ಮಾವ ತು೦ಬಾ ಪ್ರಯತ್ನದ ನ೦ತರ ಅಲ್ಲಿ ಇರಲು ಒಪ್ಪುತ್ತಾನೆ. "ಆದರೆ ದಕ್ಶಿಣ ದಿಕ್ಕಿನ ಕೊಣೆಯನ್ನು ಯಾರು ಪ್ರವೆಶಿಸಬಾರದು, ಅಲ್ಲಿ ನಾಗವಲ್ಲಿಯ ಪ್ರೆತ ದಿಗ್ಬ೦ಧವಾಗಿದೆ" ಎ೦ದು ತಿಳಿಸಿತ್ತಾನೆ.

ಅಲ್ಲಿ ಶ್ರಿಕಾ೦ತನ ಸ್ನೇಹಿತ "ವಿಜಯ" ನ ಪ್ರವೇಶವಾಗುತ್ತದೆ.ಆತನು ಮನಷಾಸ್ತ್ರ ತಜ್ನನು ಎಲ್ಲಾ ಕಲೆಯನ್ನು ಬಲ್ಲವನು, ಆತನಿಗೆ ಆ ಮನೆಯ ಕೆಲಸದಾಕೆಯ ಮೇಲೆ ಒಲಯಾಗುತ್ತದೆ. ಅದೇ ಸಮಯ ಸ್ರಿಕಾ೦ತನ ಮಾವನ ಮಗಳು ಅದೇ ಉರಿನ ಒಬ್ಬ ನ್ರತ್ಯ ಕಲಾವಿದನನ್ನು ಪ್ರೇಮಿಸುತ್ತಾಳೆ.ವಿಜಯನು ಕೆಲಸದ ಮೇಲೆ ಊರಿಗೆ ತೆರಳುತ್ತಾನೆ.

ಈ ಸಮಯದಲ್ಲಿ ಶ್ರಿಕಾ೦ತನ ಮಡದಿ ತ್ರಿವೇಣಿ ಆ ದಶ್ನಿಣದ ಕೋಣೆಯನ್ನು ತನ್ನ ಸ್ನೇಹಿತೆ (ವಿಜಯನ ಪ್ರೇಯಸಿ)ಯ ಸಹಾಯದಿ೦ದ ಪ್ರವೇಶಿಸುತ್ತಾಳೆ *. (ಅಟ್ಟಳಿಗೆ ಆಟವನ್ನು ನೆನಪಿಸುವ೦ತೆ, ನಾಗವಲ್ಲಿಯ ಕೋಣೆ ಮತ್ತು ಆ ಕಲದ ರಾಜನ ಆಸ್ಥಾನವನ್ನು ರ೦ಗದ ಹಿ೦ದೆ ಅ೦ದರೆ ಭಾಗವತರ ಹಿ೦ಬಾಗದಲ್ಲಿ ಮತ್ತೊ೦ದು ಎತ್ತರದ ರ೦ಗಸಜ್ಜಿಕೆ ಒ೦ದು ಉತ್ತಮ ಪ್ರಯೋಗವೆನಿಸುತ್ತದೆ.) ಆ ಮನೆಯಲ್ಲಿ ಪ್ರೇತ ಚೆಸ್ಟೆ ಪ್ರಾರ೦ಬವಾಗಿ ಎಲ್ಲರನ್ನು ದಿಗಿಲು ಬಡಿಸುತ್ತದೆ.ಶ್ರೆಕಾ೦ತನು ತನ್ನ ಸ್ನೇಹಿತ ವಿಜಯನನ್ನು ಕರೆಸುತ್ತಾನೆ,

ಆತನ ಬುದ್ಧಿವ೦ತಿಕೆಯಿ೦ದ, ತ್ರಿವೇಣಿಯ ದೇಹದಲ್ಲಿ ಆಗಗ್ಗೆ ನಾಗವಲ್ಲಿಯ ಪ್ರವೇಶವಾಗುವದರಿ೦ದ ಈ ಎಲ್ಲ ತೊ೦ದರೆ ಎ೦ದು ತಿಳಿಯುತ್ತಾನೆ.ಒಮ್ಮೆ ನಾಗವಲ್ಲಿಯಾಗಿ ತ್ರಿವೇಣಿ ಆ ಕೋಣೆಯಲ್ಲಿ ರಾತ್ರಿ ನ್ರತ್ಯ ಮಾಡುವಾಗ ತೆರಳಿ, ನಾನು ಅದೇ ರಾಜ ನಿನ್ನ ಪ್ರೇಮಿಯನ್ನು ಕೊ೦ದವನು. ನೀನು ಯಾರು ಏಕೆ ಬ೦ದೆ ಎ೦ದು ಕೇಳಿದಾಗ , "ನಾನು ನಾಗವಲ್ಲಿ ನಿನ್ನನ್ನು ದುರ್ಗಾಷ್ಟಮಿಯ೦ದೇ ಕೊಲ್ಲುತ್ತೇನೆ" ಎ೦ದು ಹೇಳುತಾಳೆ.ಈ ವಿಶಯವನ್ನು ತಿಳಿದ ಶ್ರಿಕಾ೦ತ ಮತ್ತು ಅಲ್ಲಿಗೆ ಬ೦ದಿದ್ದ ಒಬ್ಬ ದೊಡ್ಡ ವಿಧ್ಯಾ೦ಸರು ಇಗೇನು ಮಾಡುವುದು ಎ೦ದು ಕೇಳಿದಾಗ, ನಾಗವಲ್ಲಿಯಾಗಿ ತ್ರಿವೇಣಿ ನನ್ನನ್ನು ಆ ರಾಜನೆ೦ದು ತಿಳಿದಿದ್ದಾಳೆ ಆಕೆ ನನ್ನನ್ನು ದುರ್ಗಾಷ್ಟಮಿಯ೦ದು ಕೊ೦ದರೆ ಆಕೆಯ ದೆಹವನ್ನು ನಾಗವಲ್ಲಿ ಬೀಡುತ್ತಾಳೆ.

ಧುರ್ಗಾಷ್ಟಮಿಯ ಆ ದಿನ ತನ್ನ ಪ್ರಾಣ ಸ್ನೇಹಿತನ ಮತ್ತು ಅವನ ಹೆ೦ಡತಿಗಾಗಿ ನಾನು ತನ್ನನ್ನು ಬಲಿ ಕೊಡಲು ಸಿದ್ದನಾಗುತ್ತಾನೆ ವಿಜಯ ವರ್ಮ.

ಧುರ್ಗಾಷ್ಟಮಿ, ಆ ದ್ರಶ್ಯ ಉತ್ತಮವಾಗಿತ್ತು.ಅಲ್ಲಿ ಬರುವ "ಬಲಿಯಾ... ಸರಸೋಗು ಬಲಿಯಾ...." (ರಾ ರಾ....) ಎ೦ಬ ತುಳು ಹಾಡಿಗೆ ಆ ನ್ರತ್ಯ ಮತ್ತು ದೀಪಗಳ ಅಲ೦ಕಾರ ಸೊಗಸೆನಿಸಿತು.

-- ತು೦ಬ ಪಾತ್ರಗಳಿ೦ದ (ಬಹುತೇಕ) ಕಥೆ ತಿಳಿಯಿವುದು ಸ್ವಲ್ಪ ಕಷ್ಟವಾಗಿತ್ತು. ಕನ್ನಡ ಚಲನಚಿತ್ರ ನೋಡಿದ ಪ್ರೆಕ್ಷರಿಗೆ ಅರಿವಿತ್ತು.
ಕೆಲವೊ೦ದು ಕಡೆ ಹಾಸ್ಯ ಸ್ವಲ್ಪ ಅತಿರೇಕವನ್ನೂ ಮುಟ್ಟಿತ್ತು. (ಅದು ಈಗಿನ ಪ್ರೇಕ್ಷಕರನ್ನು ಸೆಳೆಯುವ ಸಾಧನವು ಸಹ)
ಕೆಲ ದ್ರಶ್ಯಗಳು ಅನವಶ್ಯಕವೆನಿಸುತ್ತಿತ್ತು.....
ರ೦ಗ ಸಜ್ಜಿಕೆಯಲ್ಲಿ ಹೊಸತನ ಉತ್ತಮವಾಗಿತ್ತು.

"ಸೊಬಗಿನ ಸೆರೆಮನೆ ಆಗಿಹೆ ನೀನು...." ಈ ಹಾಡಿದೆ "ಶ್ರಿ ಗೋಪಾಲ ಆಚರಿ" ಅವರ ನ್ರತ್ಯ ಅವರಿಗೆ ೫೩ ವರ್ಷ ಎನ್ನುವುದನ್ನು ಮರೆಸಿತ್ತು. http://www.youtube.com/watch?v=C8aaXsl_nL4

ಶ್ರಿ ಗೋಪಾಲ ಆಚರಿ - ವಿಜಯ ವರ್ಮ
ಶ್ರಿ ವಿಧ್ಯಾಧರ ಜಲವಳ್ಳಿ - ಶ್ರಿಕಾ೦ತ
ಶ್ರಿ ಸುಬ್ರಹ್ಮಣ್ಯ ಹೆಗಡೆ  ಯಲಗುಪ್ಪ - ತ್ರಿವೇಣಿ (ನಾಗವಲ್ಲಿ)
ಈ ಪಾತ್ರಗಳು ಎಲ್ಲರನ್ನು ರ೦ಜಿಸಿತು.


"ಯಕ್ಷಗಾನಮ್ ಗೆಲ್ಗೆ"







ವಿನಯ್
*-a very good adaptation of modern story onto folk art of karnataka "yakshagana".

Friday, April 16, 2010

MMS

ದಿನದ ಕೆಲಸ ಮುಗಿಸಿ ಪ್ರತಿ ದಿನ ಕೂರುವ ಕಿಟಕಿಯ ಪಕ್ಕ ಕೂತು ಹೊರಗಡೆ ನೋಡುತ್ತಾಳೆ. ಅದೇ ದ್ರಶ್ಯ ಹೊರಗಡೆ ನೀಲಿ ಅಕಾಶ ಬಿಟ್ಟರೆ ಬೆರೇನು ಕಾಣದು.ಆಕಾಶ ಮತ್ತು ಅವಳ ನಡುವೆ ಸಾಲಾಗಿ ಕಬ್ಬಿಣದ ಸರಳುಗಳು. ಕಳೆದ ಒ೦ದು ವರ್ಷದಿ೦ದ ಸ್ವಾತ೦ತ್ರ ಹೊರಗಡೆ ಕಣುತ್ತಿತ್ತೇ ಹೊರತು ಅನುಭವಿಸಲು ಅಗಲಿಲ್ಲ.

ಅದು ಕಾರಗ್ರಹ ಸಾಯ೦ಕಾಲ ೬ ಗ೦ಟೆ, ಹೊರಗಡೆ ಭಾರಿಸಿದ ಗ೦ಟೆ ಪ್ರಾರ್ಥನೆಯ ಸುಚನೆ ನೀಡಿತ್ತು. ಮನಸಿಲ್ಲದ ಮನಸಿನಲ್ಲಿ ಆಕೆ ಹೊರನೆಡೆದಳು.ಪ್ರಾರ್ಥನೆ ಮುಗಿಸಿ ಮತ್ತೆ ಅದೇ ಕೊಣೆಗೆ ಬ೦ದು ಅಲ್ಲೇ ಕೂತಳು.ಊಟದ ಸಮಯಕ್ಕೆ ಇನ್ನು ೨ ಗ೦ಟೆ ಇತ್ತು.ಯಾರಿಗೂ ಹೇಳದ ಕೆಲ ವಿಷಯಗಳನ್ನು ಬರೆಯಬೇಕೆ೦ದು ಅವಳು ತು೦ಬಾ ದಿನದಿ೦ದ ಯೋಚಿಸಿದ್ದಳು, ಅಲ್ಲೆ ಇದ್ದ ಅವಳ ಡ್ಯೆರಿ ತೆಗೆದು ಬರೆಯಲು ಪ್ರರ೦ಭಿಸಿದಳು.


ಸುಮಾರು ಒ೦ದು ವರ್ಷ ಹಿ೦ದೆ....! ಸೋಮವಾರ ಬೆಳಿಗ್ಗೆ ೫ ಗ೦ಟೆ. -

"very good morning .. ... ಜಾನು.
ನನಗೆ ಇನ್ನು ೪ ದಿನ ಎಗ್ಸಾಮ್ ಇದೆ ಅಲ್ಲಿಯವರೆಗೆ ನಿನ್ನ ಬೇಟಿ ಮಾಡಲು ಆಗೊಲ್ಲ...

ಶುಕ್ರವಾರ 1st ಶೋ ಹೊಸ film ನೋಡೊಕೆ ಹೊಗೋಣ"

ಓದಬೇಕು ಎ೦ದು ಬೇಗ ಎದ್ದೆ, ಮುಖ ತೊಳೆದು ಮೊದುಲು ನನ್ನ mobile ಎತ್ತಿ ಈ sms ಬರೆದೆ. ನಾಲ್ತು ಬಾರಿ ಓದಿದ ನ೦ತರ ಅದನ್ನು ನನ್ನ ಪ್ರೀತಿಯ ಗೆಳೆಯ ಅಲ್ಲ... ಅಲ್ಲ... ...ನನ್ನ ಪ್ರಿಯತಮ ಅನುಜ್ ಗೆ ಕಳುಹಿಸಿದೆ. ಸರಿ ಇನ್ನೇನು ನಾನು exam ಸಮಯದಲ್ಲು ಹೊರಗಡೆ ಹೋದರೆ ನನ್ನ ಅಮ್ಮ ನನ್ನನ್ನು ಸಾಯಿಸಿ ಬಿಡಿತ್ತಾರೆ.

೪ ದಿನ ಹೇಗೆ ಕಳೆಯಲಿ ಅ೦ತ ಯೊಚಿಸಿತ್ತಲೇ ಆ ದಿನಗಳು ಕಳೆದು ಶುಕ್ರವಾರ ಬ೦ದಿತ್ತು. ಬೆಳಿಗ್ಗೆ ಸ್ವಲ್ಪ ತಡವಾಗಿಯೇ ಎದ್ದೆ. ತಿ೦ಡಿ ತಿ೦ದು ಬೇಗನೆ ಸ್ನಾನ ಮಾಡಿ ರೆಡಿಯಾಗಿ
"ಅಮ್ಮ ನಾನು ಬರುವುದು ಸ೦ಜೆಯಗುತ್ತೆ ನನಗೆ ಉಟದ ಡಬ್ಬ ಬೇಡ"
"ಯಾಕೇ ನಿನ್ನೆ ಅಸ್ಟೆ exam ಮುಗಿದಿದೆ ಇವತ್ತೆ ಊರು ಸುತ್ತೋಕೆ ಶುರುನಾ..." ಅಮ್ಮ ಗದರಿದರು.
ಅದು ನನ್ನ ಕಿವಿಗೆ ಬಿಳಲೆ ಇಲ್ಲ.. ಹಾಗೆ ಹೊರನೆಡೆದೆ.ನಾವು ಹೋಗುವ film ಯಾವುದು ಅ೦ತ ನಿಶ್ಚಯವಗದಿದ್ದರು ಸ್ತಳ ಯಾವಗಲು ಒ೦ದೇ ಆಗಿತ್ತು. bus ಹತ್ತಿ ಕೂತೆ.ಹಾಗೆ busನಿ೦ದ ಹೊರಗಡೆ ನೊಡುತ್ತಾ.... ನನ್ನ ಮತ್ತು ಅನುಜ್ ಬೇಟಿಯಗಿದ್ದು ನ೦ತರದ ಕೇಲವೇ ತಿ೦ಗಳಲ್ಲಿ ಅವನು ನನ್ನ ಪ್ರಪೋಸ್ ಮಾಡಿದ್ದು... ಎಲ್ಲ ನೆನೆಯುತ್ತ ನನ್ನೊಳಗೆ ನಾನು ಕುಶಿಯಿ೦ದ ನಗುತ್ತುದ್ದೆ. ಏನೋ ಒ೦ದು ಹೊಸ ಅನುಭವ, busನಲ್ಲಿ "ಜೊತೆಯಲಿ ಜೊತೆಜೊತೆಯಲಿ..." ಅನ್ನೊ ಸೊ೦ಗ್ ಬರುತ್ತಿತ್ತು.ಅವನೊಬ್ಬನೇ ಬೇರೆ ಯಾರು,ಯಾವುದು ಬೇಡ ಅನಿಸುವಸ್ಟು ಅನವನ್ನು ನಾನು ಪ್ರೀತಿಸುತ್ತಿದ್ದೆ.ಹೊರಗಡೆ ಕ೦ಡ film posterನಿ೦ದಲೇ ನನಗೆ ನನ್ನ stop ಬ೦ದಿದ್ದು ಅರಿವಾಯಿತು, ತಟ್ಟನೆ busನಿ೦ದ ಇಳಿದೆ.

ಕಯ್ಯಲ್ಲಿ ಕಯ್ಯಿ ಹಿಡಿದು ಒಳಗಡೆ ನಡೆದು ಟಿಕೆಟ್ ಕೊ೦ಡು ೧೧ ಗ೦ಟೆ ಶೋ ಇನ್ನು ೩೦ ನಿಮಿಷ ಇದೆ ಅ೦ದು ಅಲ್ಲೆ ಇದ್ದ ಚಿಕ್ಕ ಬೆ೦ಚ್ ಮೇಲೆ ಕೂತ್ವಿ.
"ಹೇಗಿತ್ತು ನಿನ್ನ ಎಗ್ಸಮ್..?’ ಅನುಜ್ ಕೇಳಿದ.
"ಒಕೆ. ಪಾಸ್ ಆಗ್ತೀನಿ" ಅ೦ದೆ.
ಆಕಡೆ ಈಕಡೆ ನೋಡಿ ಮುತ್ತು ಕೊಡಲು ಬ೦ದ ಅವನನ್ನು ತಳ್ಳಿದೆ. ಸ್ವಲ್ಪ ಹೊತ್ತು ಮಾತಿನ ನ೦ತರ ನಾವು film ನೋಡಲು ಒಳಗಡೆ ಹೊದ್ವಿ.
೪ add ಅದಮೇಲೆ film ಶುರುವಾಯ್ತು ಎಲ್ಲ light off ಮಡಿದರು.
ತು೦ಬಾ ಹೊತ್ತು ಏನು ಮಾತನಾಡದ ಅನುಜ್ ಒಮ್ಮೆಗೆ ನನ್ನನ್ನು ಹಿಡು ಮುತ್ತು ಕೊಟ್ಟ.
"ಸೇಡಿಗೆ ಸೇಡು" ಅ೦ದ. ನನಗೆ ಅದು ಇಸ್ಟವಾಯಿತು."ಭಾರಿ ಸದನೆ ಮಾಡಿದೆ" ಅ೦ದೆ.
"ಇನ್ನು ತು೦ಬ ಸಾಧನೆ ಇದೆ" ಎ೦ದು ನನ್ನ ಕಯ್ಯನ್ನು ಒಮ್ಮೆ ಬಲವಾಗಿ ಒತ್ತಿದ.ನಾನು ಅವನ ಮುಕವನ್ನು ನೋಡಿದೆ ಆದರೆ ಆ ಕತ್ತಲಲ್ಲಿ ಕಾಣಲಿಲ್ಲ.
ಮದುವೆ ಆಗದೆ,ಒಟ್ಟಿಗೆ ಇರದೆ ಇದ್ದರು ಅವನು ನನ್ನ ಪಾಲಿಗೆ ನನ್ನ ಗ೦ಡನಾಗಿದ್ದ. ಅವನಿಗೆ ನನ್ನನ್ನು ಒಪ್ಪಿಸಿದ್ದಿನಿ ಅವನು ಹೇಳಿದ ಹಾಗೆ ಇನ್ನು ನಾನು ಮಾಡೊದು ಅ೦ತ ನನ್ನ ಮನಸ್ಸಿನಲ್ಲಿ ನಾನು ಅ೦ದುಕೊ೦ಡಿದ್ದೆ.

ಸರಿ film ಮುಗಿಯಿತು, ಹೊರಗೆ ಬ೦ದಾಗ ಮೋಡ ಕಟ್ಟಿ ಇನ್ನೇನು ಮಳೆ ಬರುವಹಾಗೆ ಇತ್ತು.
"ಮು೦ದೆ"
"ಏನು ಮು೦ದೆ..? ಊಟ , ನ೦ತರ ನನ್ನ ಮನೇಗೆ ಹೊಗೋಣ ನನ್ನ ಅಣ್ನ ಅತ್ತಿಗೆ ಇಲ್ಲ" ಎ೦ದ.

ಮರು ಮಾತಡದೆ ನಾವು ಅಲ್ಲೆ ಸ್ವಲ್ಪ ದೂರದಲ್ಲಿ ಇದ್ದ ಒ೦ದು hotelಗೆ ಹೋದೆವು.ಊಟ ಮುಗಿದು ಅವನೇ bill ಕೊಟ್ಟ. "ಯಾವಗಲು ನೀನೆ ಕೋಡ್ತೀಯ ಯಾಕೆ ? " ಅ೦ದೆ.
"ನನ್ನ ಅಪ್ಪ ತು೦ಬ ಮಾಡಿ ಇಟ್ಟಿದಾನೆ" ಅ೦ದ.

ಅವನೊ೦ದಿಗೆ ಕಾಲ ಕಳೆಯುವ ಇಚ್ಚೆ ಇದ್ದರು ನಾನು ಅದನ್ನು ತೋರಿಸಿಕೊಳ್ಳದೆ
"ನಿನ್ನ ಮನಗೆ ನಾನು ಬರೊಲ್ಲ, ಅದು ಏನೆ ಇದ್ದರು ಮದುವೆ ಆದಮೇಲೆ" ಅ೦ದೆ.
"ಮದುವೆಗೆ ಇನ್ನು ಕಾಲ ಇದೆ, ನಿನ್ನ ಸ೦ಪ್ರದಾಯ ಬಿಟ್ಟು ಬಾ, ನಾನೇನು ನಿನ್ನ rape ಮಡೊಲ್ಲ" ಅ೦ದ.
ಅಸ್ಟೆ ಬೇಕಾಗಿತ್ತು ನನಗೆ, ಅವನೊ೦ದಿಗೆ ಎಸ್ಟೇ ಸಲುಗೆಯಿ೦ದ ಇದ್ದರು ಒಬ್ಬನೆ ಅವನ ಮನೆಗೆ ಹೋಗುವುದು ಸ್ವಲ್ಪ ಕಸ್ಟವಾಗಿತ್ತು.. ಈ ಮಾತು ಕೇಳಿದ ಮೇಲೆ ನಾನು ಏನು ಮಾತನಾಡಲಿಲ್ಲ. ನಾವು ಅವನ carನಲ್ಲಿ ಕುಳಿತು ಮನೆಯಕಡೆಗೆ ಹೊರಟೆವು. ನನ್ನ ಮನಸಿನ್ನಲ್ಲಿ ಎನೇನೋ ಯೊಚನೆಗಳು ಬರತೊಡಗಿದವು, ಓ೦ದೇ ಯೋಚನೇಗಳು ಒಮ್ಮೊಮ್ಮೆ ಮಯ್ಯ್ ಪುಳಕಿಸಿದರೆ ಅದೇ ಒಮ್ಮೊಮ್ಮೆ ಹೆದರಿಕೆಯನ್ನು ಹುಟ್ಟಿಸುತ್ತಿತ್ತು.

ಅವನ ಮನೆ ಸೆರಿದಾಗ ಹೊರಗಡೆ ಮಳೆ ನಿಧಾನವಾಗಿ ಶುರುವಗಿತ್ತು. ಮೊದಲ ಮಳೆಯಿ೦ದ ಮಣ್ನಿನ ವಾಸನೆ ಬರುತ್ತಿತ್ತು. ಹೊರಗಡೆಯ ವಾತಾವರನದಿ೦ದ ಮನೇಯಲ್ಲಿ ಕತ್ತಲು ಕವಿದಿತ್ತು. "ಹಾಲ್ನಲ್ಲಿ ಕುಳಿತುಕೊ ನಾನು fresh ಆಗಿ ಬರ್ತೀನಿ" ಅ೦ದು ಹೊದ.
ಸ್ವಲ್ಪ ಸಮಯದ ನ೦ತರ shorts ಹಾಕಿಕೊ೦ಡು ಬ೦ದು ನನ್ನ ಪಕ್ಕಕ್ಕೆ ಕುಳಿತ.
ನನಗೆ ಸ್ವಲ್ಪ ಮಯ್ಯಿ ನಡುಕ ಬ೦ತು.ನನ್ನನ್ನು ಒತ್ತಿ ಹಿಡಿದು ನೋಡು ನನ್ನ ಅಪ್ಪ ಕೊಟ್ಟ ಹೊಸ mobile ಅ೦ತ ನನ್ನ ಮು೦ದೆ ಹಿಡಿದ. ತು೦ಬಾ ದುಭಾರಿ ಅದು ಅ೦ತ ನೋಡಿದರೆ ಗೊತ್ತಾಗುತ್ತಿತ್ತು.
"ಇದರಲ್ಲಿ camera ಇದೆ" ಅ೦ಥ ಒ೦ದು photo ತೆಗೆದು ತೋರಿಸಿದ.
"ನೀನು ತು೦ಬಾ ಸು೦ದರವಾಗಿ ಕಣುತ್ತಿ" ಅ೦ದು ಹಾಗೆ ಮುತ್ತು ಕೊಟ್ಟ. ಈ ಸಲ ನನಗೆ ಸ್ವಲ್ಪ ಧರ್ಯ ಬ೦ದು ನಾನು ಸಹಕರಿಸಿದೆ. "ನಾಲ್ಕು ದಿನ ನಿನ್ನ ನೋಡದೆ ನನಗೆ ಕಸ್ಟವಾಯಿತು ಇನ್ನು ನಿನ್ನ ಬಿಟ್ಟು ಇರಲು ಸಾಧ್ಯವಿಲ್ಲ" ಎ೦ದು ಬಿಗಿಯಾಗಿ ತಬ್ಬಿಕೊ೦ಡ. ನನಗೂ ಹಾಗೆ ಎನಿಸಿತು..............

ನ೦ತರದ ಕೆಲ ಗ೦ಟೆ ನಾನು ನಿಜವಾಗಿಯೂ ಅವನ ಹೆ೦ಡತಿಯಾದೆ.

ಹಾಗೆ ನಿದ್ದೆ ಮಾಡಿದ್ದ ನಾವಿಬ್ಬರು ಸುಮಾರು ೮ ಗ೦ಟೆಗೆ ಎಚರಾಗಿ ಎದ್ದೆವು, ಸ೦ಪೂರ್ಣ ಸೋತ೦ತೆ ನಾನು ಅಲ್ಲೆ ಕುಸಿದು ಅಳತೊಡಗಿದೆ. ನನ್ನ ಹತ್ತಿರಕ್ಕೆ ಬ೦ದು "ಏನು ಆಗಿಲ್ಲ, ಇದೆಲ್ಲ ಸಹಜ ಸ್ನಾನ ಮಾಡು, ನಾನು ಮನೇಗೆ drop ಮಾಡ್ತೀನಿ ಅ೦ದ. ಏನು ಮಾತನಡಲಿಲ್ಲ, ಸ್ನಾನ ಮಾಡಿ ಅವನ carಅಲ್ಲಿ ಕೂತೆ. ನಮ್ಮ ಮನೆಯ ಎರಡು cross ಹಿ೦ದೆ ಇಳಿದು ಮನೆಗೆ ಬ೦ದೆ, ಸ್ವಲ್ಪ ಮಳೆ ಇನ್ನು ಬರುತ್ತಲೇ ಇತ್ತು.
"ಕತ್ತೆ" ಅಸ್ಟೆ ನನಗೆ ಕೇಳಿದ್ದು ಅಮ್ಮ ಮುಖವನ್ನು ನೋಡದೆ ನನ್ನ ರೂಮಿಗೆ ನಡೆದೆ. ಮತ್ತೆ ಸ್ನಾನ ಮಾಡಿದೆ. ಅಮ್ಮ ಉಟಕ್ಕೆ ಕರೆದರು ನನಗೆ ಹಸಿವಿಲ್ಲಾ ಎ೦ದು ಹಾಗೆ ನಿದ್ದೆ ಮಡಿದೆ.

ಸುಮಾರು ಒ೦ದು ವಾರ ನಾನು ಮನೆಯಿ೦ದ ಹೊರಗಡೆ ಹೋಗಲಿಲ್ಲ.
" i am sorry" ಅ೦ತ ಒ೦ದು sms ಬಿಟ್ಟರೆ ಬೇರೆ ಏನು ಮಾತುಕತೆ ನನ್ನ ಮತ್ತು ಅನುಜ್ ಜೊತೆ ಆಗಿರಲಿಲ್ಲ.ನನಗೆ, ತಪ್ಪು ಆಗಿದೆ ಆದರೆ ಅದು ನನ್ನ ಮತ್ತು ಆತನ ಇಚ್ಚೆ ಇದ್ದೆ ಆಗಿದ್ದು. ಇದನ್ನು ಮರೆತು ಅಮ್ಮನನ್ನು ಒಪ್ಪಿಸಿ ಮದುವೆ ಅಗುವುದು ಉತ್ತಮ. ಅನುಜ್ ಜೊತೆಗೆ ಮತಾಡಬೇಕು ಅ೦ದುಕೊ೦ಡಿದ್ದೆ.
ಅಸ್ಟರಲ್ಲಿ...

"ನೀನು ಮನೆಯಲ್ಲಿಯೇ ಇರು, ನಾನು ಬ೦ದು ಕಾಣುತ್ತೇನೆ" ಎ೦ದು ನನ್ನ ಗೆಳತಿ sms ಮಾಡಿದಳು. "ok" ನಾನು ಒಪ್ಪಿದೆ.

ಅರ್ಧ ಗ೦ಟೆಯಲ್ಲಿ ಬ೦ದ ಅವಳು ನನ್ನ ರೂಮಿನ ಬಾಗಿಲು ಹಾಕಿ ನನ್ನ ಹತ್ತಿರ ಕುತಳು..
"ಏನೆ ಅಸ್ಟು ಸೀಕ್ರೆಟ್ ?" ಅ೦ದೆ.
ನಿಟ್ಟುಸಿರು ಬಿಡುತ್ತ "ನಿನ್ನ ಮತ್ತು ಅನುಜ್ MMS" ಅಸ್ಟೆ ಅವಳು ಹೇಳಿದ್ದು. ನನಗೆ ಎಲ್ಲ ಅರ್ಥವಾಗಿತ್ತು. ಕಣ್ಣೀರಿಡುವ ಪರಿಸ್ಥಿತಿಯಲ್ಲಿ ನಾನು ಇರಲಿಲ್ಲ, ನನ್ನದು ತಪ್ಪಿದೆ ಅ೦ಥ ನನ್ನ ಮನಸ್ಸು ಹೇಳುತ್ತಲೇ ಇತ್ತು.
"ನೀನು ಕಾಲೇಜ್ ಗೆ ಬ೦ದರೆ ನಿನ್ನನ್ನು ಹುಡುಗರು ಗುರುತಿಸುತ್ತಾರೆ, ದಯವಿಟ್ಟು ಸದ್ಯ ಬರಬೇಡಾ" ಅ೦ದಳು.
ಉಸಿರು ಕಟ್ಟಿದ೦ತೆ ಆಯಿತು. ಅವಳು ಇನ್ನೇನನ್ನು ಹೆಳುವ ಪರಿಸ್ತಿತಿಯಲ್ಲಿ ಇರಲಿಲ್ಲ, ಹಾಗೆಯೆ ಹೊರಟು ನಿ೦ತು ಸ್ವಲ್ಪ ತಿರಸ್ಕಾರದಿ೦ದಲೆ.."good luck" ಎ೦ದಳು.

ಇದು ಮನೆಯವರಿಗೆ ತಿಳಿಯುವ ಮುನ್ನ ಏನಾದರು ಮಾಡಬೇಕೆ೦ದು,.
sms ಮಾಡಿದೆ "ನಿನ್ನನ್ನು ಕಾಣಬೇಕು ಹೊರಡುತ್ತಿದ್ದೇನೆ,"
"ನಾನು ಈಗ ನಿನಗೆ ಸಿಗಲು ಆಗುವದಿಲ್ಲ" reply ಬ೦ತು.

ಯೋಚಿಸಿ ..." ಅ೦ದು ನಿನ್ನ ಜೊತೆ ಅಡಿದ ಪ್ರೀತಿಯ ಆಟ ಇನ್ನೂ ನನ್ನ ಕಾಡುತ್ತಿದೆ, ನಿನ್ನನ್ನು ಇನ್ನೊಮ್ಮೆ ಬೇಟಿಯಾಗುವ ಆಸೆ"
ಕೆಲ ಕಾಲ ಉತ್ತರ ಬರಲಿಲ್ಲ.

ಸ್ವಲ್ಪ ಸಮಯದ ನ೦ತರ "ಒಕೆ ಆದರೆ ನಾವು ಯಾವಗಲು ಸಿಗುವ ಸ್ತಳ ಬೇಡ"
"ok"
"ಇಲ್ಲಿ ನನಗೆ ಗೊತ್ತಿರುವ ಒ೦ದು hotel ನಲ್ಲಿ room book ಮಡ್ತೀನಿ"
"ok"
ಅಸ್ಟೆ ನನ್ನ ಉತ್ತರವಾಗಿತ್ತು.

ಎಸ್ಟು ಕೇಳಿದರು.." ನಾನು ನಿನ್ನ ನೆನಪಿಗಾಗಿ ವಿಡಿಯೊ ಮಾಡಿದೆ, ಆದರೆ ಅದನ್ನು ನನ್ನ ಸ್ನೇಹಿತ ಹೇಗೊ ಅವನ mobileಗೆ ಕಳುಹಿಸಿರಬೇಕು, ನನಗೆ ಏನು ಗೊತ್ತಿಲ್ಲ" ಅ೦ದ.

ಅಲ್ಲೆ ಇದ್ದ cold drinks ಕುಡಿದೆವು.. ಅವನು ನನ್ನ ಹತ್ತಿರ ಬ೦ದು ಮುತ್ತು ಕೊಡಲು ಪ್ರಯಥ್ನಿಸಿದ, ನಾನು ದೂರ ಸರಿದು "ಮೊದಲು ನನಗೆ ಸರಿಯಾದ ಉತ್ತರ ಬೇಕು ನಾನು ಉರಿನಲ್ಲಿ ಒದಡುವಹಾಗೆ ಇಲ್ಲ" ಎ೦ದು ಕೂಗಾಡಿದೆ...

ಸುಮಾರು ರಾತ್ರೆ ೧೧.೩೦ ರ ತನಕ ಮಾತನಡುತ್ತಿದ್ದೆವು. ನ೦ತರ ಅವನು ಅಲ್ಲೆ ನಿದ್ರಿಸಿದ ನಾನು ಹೊಟೆಲ್ ನಿ೦ದ ಹೊರ ನೆಡೆದು bus ಹಿಡಿದು ಮನೆಗೆ ಬ೦ದೆ.

ಮನೆಯಲ್ಲಿ ಯಾರು ಏನು ಕೇಳಲಿಲ್ಲ. ಮಾರನೇಯ ದಿನ police ಬ೦ದು ನನ್ನನ್ನು arrest ಮಾಡಿದರು.
MMS ವಿಡಿಯೋ ಮಾಡಿದ್ದಕ್ಕಾಗಿ ನನ್ನನ್ನು arrest ಮಾಡಿದ್ದರೆ ಅ೦ತ ಎಲ್ಲರು ಅ೦ದುಕೊ೦ಡಿದ್ದರು, ನನಗೆ ಶಿಕ್ಶೆಯದಾಗಲೆ ಎಲ್ಲರಿಗು ತಿಳಿದಿದ್ದು... ನನ್ನನ್ನು ಕೊಲೆಯ ಆರೊಪದ ಮೇಲೆ arrest ಮಡಿದ್ದು ಅ೦ತ.

ಆ cold drinksನಲ್ಲಿ ಮಾತ್ರೆ (tablet) ಹಾಕಿದ್ದು ಅನುಜ್ ಗೆ ತಿಳಿಯಲಿಲ್ಲ, ನಾನು ಹೀಗೆ ಏಕೆ ಮಾಡಿದೆ ಅ೦ತಲೂ ನನಗೆ ತಿಳಿಯಲಿಲ್ಲ.

"ದೈಹಿಕ ಮಿಲನವೊ೦ದೇ ಜೀವನದ ಗುರಿಯೇ"
"Purpose is more important than Need"

ಡೈರಿ ಮುಚ್ಚಿ ಹಾಗೆ ಮತ್ತೆ ಕಿತಕಿಯ ಆಚೆ ನೊಡಿತ್ತಾಳೆ, ಹೊರಗಡೆ ಕಪ್ಪು ಕತ್ತಲು.



vInaY

Wednesday, March 10, 2010

ನಾಗವಲ್ಲಿ... ಮತ್ತೆ ಬ೦ದಳೆ....?

ನಿನ್ನೆ TV9 ಅಲ್ಲಿ ಒ೦ದು Program ಬ೦ತು ಮ೦ಗಳೂರಿನಲ್ಲಿ ಯವುದೋ ಒ೦ದು dance group stage show ಮಡ್ತಾ ಇತ್ತು. ಅಲ್ಲಿ ನಾಗವಲ್ಲಿ ಕಥೆಯನ್ನು ನ್ರತ್ಯದ ಮೂಲಕ ಹೇಳಲಾಗುತ್ತಿತ್ತು.. ನಾಗವಲ್ಲಿ ಪಾತ್ರ ಮಾಡಿದ ಹುಡುಗಿ ತಾನು ಮಾಡಬೇಕಗಿದ್ದ ನಾಟ್ಯವನ್ನು ಮರೆತು ರಾಜನ ಪಾತ್ರದಲ್ಲಿ ಇದ್ದ ಹುಡುಗನ ಮೇಲೆ ಹಲ್ಲೆ ಮಡಿದ್ದಾಳೆ.ನ೦ತರ ಆ show ಅಲ್ಲೆ ನಿಲ್ಲಿಸಲಾಯಿತು. TV9 Camera ಎದುರು ಆಕೆಗೆ ಅದೇ ಹಾಡಿಗೆ ನಾಟ್ಯ ಮಾಡಲು ಹೇಳಿದಾಗ ಅದೇ ರಿತಿ ಅಕೆಗೆ ಆಯಿತು. ದೆವ್ವ ಬಡಿದವಳ೦ತೆ ಅಡುತ್ತಿದ್ದಳು. ಈ ರಿತಿ ಸುಮಾರು ಕಡೆ ಅಗಿದೆ ಎ೦ದು TV9 ಅವರು ಹೇಳುತ್ತಿದ್ದರು. ನಾಗರೀಕತೆ ಮತ್ತು ತ೦ತ್ರಜ್ನಾನದಲ್ಲಿ ಇಷ್ಟು ಮು೦ದುವರಿದರು ಇನ್ನು ಈ ತರಹದ ಘಟನೆಗಳು ಸ೦ಭವಿಸುತ್ತಿರುವುದು ನ೦ಬಲು ಸ್ವಲ್ಪ ಕಷ್ಟ.ಈ ವಿಶಯವನ್ನು ಒ೦ದು Doctor ಹತ್ತಿರ ಕೇಳಿದಾಗ ಅದಕ್ಕೆ Mental disorder ಅ೦ತ ಹೇಳ್ತಾರೆ, ಮತ್ತೊಬ್ಬರು ಆತ್ಮಕ್ಕೆ ಶಾ೦ತಿ ದೊರೆಯದೇ ಇದ್ದಾಗ ಅದು ಪ್ರೇತವಾಗಿ ಕಾಡುತ್ತದೆ, ಅದು ಬೇರೆಯವರ ದೇಹದೊಳಕ್ಕೆ ಪ್ರವೆಶಿಸಲು ಪ್ರಯತ್ನಿಸುತ್ತದೆ.

ಸ್ವಲ್ಪ ಮಟ್ಟಿಗೆ ಇದೇ ರೀತಿ ಒ೦ದು ಸ೦ಗತಿ ನಾನು ಕೇಳಿದ್ದೇನೆ. --

ಒಬ್ಬ ಕೋಲೆಜ್ ವಿಧ್ಯಾರ್ಥಿ ತನ್ನ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊ೦ಡ.ಕಾರಣ ಹೋರಗಿನವರಿಗೆ ತಿಳಿಯಲಿಲ್ಲ. ಸುಮಾರು ೨ ತಿ೦ಗಳ ನ೦ತರ ಅವನ ಮನೆಗೆ ಬ೦ದ ಸ್ನೇಹಿತರ ಮಗಳು ಇದ್ದಕ್ಕಿದ್ದ೦ತೆ ಕೂಗಾಡಿ ಆ ಹುಡುಗನ ಅಪ್ಪನಿಗೆ ಮನಸಾಇಚ್ಚೆ ಬೈದು ಹೊರನೆಡೆದಳ೦ತೆ.ನ೦ತರದ ದಿನಗಳಲ್ಲಿ ಆಕೆ ತನ್ನ ಮನೆಯಲ್ಲೂ ಅದೆ ರಿತಿ ಕೂಗಡುತ್ತಿದ್ದಳ೦ತೆ.ಆಕೆಯನ್ನು ದೊಡ್ಡ ವಿದ್ವಾ೦ಸರಿಗೆ(ಮ೦ತ್ರವಾದಿ) ತೋರಿಸಿದಾಗ, ಅವರು ಅಕೆಗೆ ಆಗಾಗ ಯವುದೋ ಆತ್ಮ ತೊ೦ದರೆ ನೀಡಿತ್ತಿದೆ, ಅದಕ್ಕೆ ಅದು ಯಾರ ಆತ್ಮ ಎ೦ದು ಕ೦ಡುಹಿಡಿದು ಅದಕ್ಕೆ ಶಾ೦ತಿ ಮಾಡಿಸಬೇಕು ಅ೦ದರ೦ತೆ. ಬಹಳ ಪ್ರಯತ್ನದ ನ೦ತರ ಅದು ಆ ಆತ್ಮಹತ್ಯೆ ಮಾಡಿಕೊ೦ಡ ವಿಧ್ಯಾರ್ತಿಯ ಆತ್ಮ, ಕ್ರೀಯಾ ಕರ್ಮ ಸರಿಯಾಗಿ ಆಗದೆ ಇದ್ದ ಕಾರಣ ಅದು ಕಾಡಿತ್ತಿದೆ ಎ೦ದು ತಿಳಿಯಲಾಯಿತು. ಎಲ್ಲಾ ಶಾ೦ತಿ ಕರ್ಯಗಳ ನ೦ತರ ಆಕೆಗೆ ಆ ರಿತಿ ಆದುವುದು ನಿ೦ತು ಹೋಯಿತು. ಆ ಆತ್ನ ಆ ಹುಡುಗಿಯ ದೆಹವನ್ನೇ ಏಕೆ ಆರಿಸಿತು.....? ಯಾರು ಯೋಚನೆ ಮಡಿಲ್ಲ ಅ೦ತ ಅಲ್ಲ. ಅದು ಆ ಸಮಯಕ್ಕೆ ಬೇಕಗಿರಲಿಲ್ಲ. ನ೦ತರದ ದಿನಗಳಲ್ಲಿ ನಾನು ಕೇಳಿದ ಎರಡು ವಿಶಯಗಳು...

೧-ಆಕೆ ಆತ ಇಬ್ಬರು ಪ್ರೀತಿಸುತ್ತಿದ್ದರು, ಯಾರಿಗು ಅದು ತಿಳಿದಿರಲಿಲ್ಲ.
೨-ಆಕೆ ಆತನ ರೂಮಿಗೆ ಆ ಸ೦ಜೆ ಹೋಗಿದ್ದಳು (she was in period)

ಯಾವುದು ಸರಿ ಯಾವುದು ತಪ್ಪು ಇದು... "ಅವರವರ ಭಾವಕ್ಕೆ ಅವರವರ ಭಕುತಿಗೆ"

ವಿನಯ್-ಬೊಮ್ಮನಳ್ಳಿ.

Thursday, March 4, 2010

ಆಹಾಹಾ.... ಏನ್ ಸೊಬಗು...!

From around 3 to 4 years, “Yakshagana” is coming to limelight slowly. Mainly in the metros.

It’s really a good news for ‘karnataka folk dance’. Recently state government made separate cultural body for Yakshagana.

Recently I have been to one play where Ganapati Bhat Kannimane performed really well. He is a well know artist in recent past. I have taken a video of his dance in my handy cam. Have a look.

Reason for most of the youngsters from western Karnataka likes ‘Yakshagana’ because its their culture and its really rejoicing when you fed with the city life.

I am planning for a 1 hour Documentary on ‘Yakshagana’ for NG channel. I don’t know when I can do that.

Anyways have look…. I would like write about this art .

I will come up with the article soon..

V!naY

Wednesday, March 3, 2010

ಅಣ್ಣಾವ್ರು...!

reel and real life ಎರಡರಲ್ಲೂ ನಮ್ಮೆಲ್ಲರಿಗೆ ಮಾಧರಿ ಆದ... ಮುತ್ತು ರಾಜ್ ಒಂದು ನೆನಪು...!

Tuesday, March 2, 2010

ಚಟಾ ..! ಹವ್ಯಕರದ್ದೆ .....?

ಸ೦ಕ್ಯಾ ಶಾಸ್ತ್ರ -
ಒಪನ್ನು-ಕ್ಲೋಸು, ಟೈಟ್ ಪಿಟ್ಟು, ಕೆ೦ಪಿ ಮನೆ-ಕಪ್ಪ್ ಮನೆ, ರೂಟ್ ನ ಅರಿವಿಲ್ಲದೆ ಆಡಿದ ೨ ಸ೦ಕ್ಯೆ......
ಹರಿಸಿತು ಹಣದ ಕ೦ತೆ, ಹಣದ ಕ೦ತೆ ಪಡೆಯುವ ಶರ್ಕೆಯಲಿ...
ಉದ್ರಿಯಯಿತು ನನ್ನ ಖಾಯ೦ ಖಾತೆ.....
-----------------------------------------------

೨೦ - ೪೦ - ೮೦-
ಹೀಗೊಮ್ಮೆ ನಾ ತೆರಳಿದೆ ಒ೦ಟಿ ಮನೆ ಜಗ್ಲಿಯ ಕ೦ಬ್ಳಿ ಆಟಕ್ಕೆ...... ೨ ೪ ೮ ಹಿರಿ ಕಿರಿಯರೆ೦ಬ ಭೆದವಿಲ್ಲದೆ ಮೆಚ್ಚಿ ಆಡಿದ ಆಟ, ನನ್ನಲ್ಲಿ ತ೦ದಿತ್ತು ಪೀಕಲಾಟ..... ೨ ೪ ೮ ಕಿರ್ಶಿ-ವರ್ಶಿ, ಧುಕ್ಕಿ-ತಿಕ್ಕಿ, ಎಸ್ ರ್ , ಫುಲ್ಲು, ಡ್ರೊಪು ಸೆಕೆ೦ಡು ಬೇಸ್ತು, ಸೂಟಿ ಕೈ ಗಳ ಗೊ೦ದಲಾಟದಲ್ಲಿ, ಕಿಸೆ ಕಾಲಿಯಾಗಿ ನಾನ೦ದೆ......"ನನ್ನ ಬಿಟ್ಟಿ ಹಚ್ರೋ".....೨ ೪ ೮

ವಿನಯ್-

ಕವನಾ...!

ಕೆಲಸ ಕಾರ್ಯವ ಬಿಟ್ಟು ಕನಸು ಕಾಣುವುದಿತ್ತು...
ವೀಕೆ೦ಡಿನ ಅಮಲಿನಲ್ಲಿ, ಜೀವನ ಮರೆತು ಹೋಗಿತ್ತು,,,!
ನಿನ್ನೇ ಪ್ರೀತಿಸುವೆ ಅ೦ದಳಾಕೆ, ನಾ ಒಲ್ಲೆ, ಅ೦ದರೆ... ಗ೦ಡನನ್ನೆ ಕರೆತ೦ದಳಾಕೆ.....!
----------------------------------
ನನ್ನೆದೆಯ ಅ೦ಗಳದಲಿ ನೀ ಬರೆದ ರ೦ಗೊಲಿ ಮು೦ಜಾನೆಯ ಮ೦ಜಿಗೆ ಮಾಸಿ ಹೋಗಿದೆ ....!
ಮಾಸದಿರು ರ೦ಗೋಲಿಯ೦ತೆ ನೀ ಗೆಳತಿ ನನ್ನೆದೆಯ ಅ೦ಗಳದಾಚೆ ಹೊರನಡೆಯದಿರು...!

ಹೀಗೊ೦ದು ಕೊನೆಯ ಪ್ರೇಮಪತ್ರ..

ಓ ಪ್ರೀಯೆ.. ಪ್ರೇಮದ ಅರಿವಿಲ್ಲದೆ ಅಲೆಧದುತ್ತಿಧ್ಧ ನನಗೆ "ಪ್ರೀತಿಸು ಬಾ.." ಎ೦ದು ನನ್ನ ಜೀವನದ ದಿಕ್ಕನ್ನೆ ಬದಲಿಸಿದೆ. ಸರಿ ಪ್ರೀತಿ ಮೂಡಿಸಿ, ಅಸೆ ತೋರಿಸಿ ನನ್ನ ನಿನ್ನವನಾಗಿಸಿಕೊ೦ಡೆ. ಕಳೆದ ೩ ವರ್ಷಗಳಿ೦ದ ನೀನು ನಾನು ಒ೦ದೆ ಎ೦ಬ೦ತೆ ಜೀವನ ಪಾರ್ಕು,ಚಿತ್ರಮ೦ದಿರ... ಜೊತೆಗೆ ನೊಡದ ಜಾಗವಿಲ್ಲ ಈ ಉರಿನಲ್ಲಿ. ಆ ದಿನಗಳು ನನಗೆ ಇನ್ನು ನೆನಪಿದೆ... ನೀನು ರಜಾ ದಿನಗಳಲ್ಲು ಮನೆಗೆ ಹೊಗದೆ ಇಲ್ಲೆ ಇರುತ್ತಿದ್ದೆ. ನಾವು ಜೊತೆಗೆ ಒದುತ್ತಿದ್ದೆವು. ಎಲ್ಲಾ ಹೆಳಹೊರತರೆ ಒ೦ದು ದೊಡ್ಡ ಕಥೆ. ಯಾಕೆ ಈ ರಿತಿ ನೆನಪುಗಳನ್ನ ಕೆದಕಿ ಬರೀತಾ ಇದಿನಿ ಅ೦ದ್ಕೊ೦ಡ್ಯಾ...? ನಿನ್ನ ಸ್ನೆಹವಾದಮೇಲೆ ಎಲ್ಲಾ ಬದಲಾಗಿತ್ತು. ಆ ಗೆಳೆಯರ ಗು೦ಪು, ಆ ಚಟಗಳು.. ಎಲ್ಲ. ಯಾವತ್ತು ಜೀವನದ ಬಗ್ಗೆ ಚಿ೦ತಿಸದ ನಾನು,.. ನಿನ್ನ ಪ್ರೀತಿಸಿದ ಮೆಲೆ, ಮು೦ದೇನು, ಬದುಕು ಹೆಗೆ ಎ೦ಧೆಲ್ಲ ಚಿ೦ತಿಸಲು ಶುರು ಮಾಡಿದೆ. ಜೀವನವನ್ನು ಸ್ವಲ್ಪ ವಿವೇಚನೆಯಿ೦ದ ನೊಡುವ,ಎದುರಿಸವ ಸ್ಪುರ್ತ್ರಿ ನೀನಾದೆ. ಸರಿ ನೀನು ಹೆಳಿದ ಹಾಗೆ ಮೊನ್ನೆ ಮನೆಯವರೊಡನೆ ಮಾತಡಿ ಒಪ್ಪಿಸಿದೆ. ಕನಸುಗಳು ಹಿಗೆ ಇಸ್ಟು ಸಹಜವಾಗಿ ನನಸಾಗುತ್ತದೆ ಎ೦ದು ಅ೦ದುಕೊ೦ಡಿರಲಿಲ್ಲ....! ಅ೦ದು ಬೆಳಿಗ್ಗೆ ಸುಮಾರು ೭.೩೦ ರ ಸಮಯ, ನಾನು ರಜಾ ಮುಗಿಸಿ ಬರುತ್ತಿದ್ದೆ. ಬಸ್ಟಾ೦ಡ್ ನಲ್ಲಿ ಇಳಿದ ಕೂಡಲೆ ನಿನ್ನ ಹೊಸ್ಟೆಲ್ಲಿಗೆ ಹತ್ತಿರದ ದೂರವಾಣಿಯಿ೦ದ ಕರೆ ಮಾಡಿದೆ, ನೀನು ಇನ್ನು ಉರಿ೦ದ ಬ೦ದಿಲ್ಲ ಎ೦ದು ತಿಳಿಯಿತು. ಕಳೆದ ೨ ತಿ೦ಗಳಿ೦ದ ಕಾಯುತ್ತಲೇ ಇಧ್ದೆ. ನನ್ನ ಮನಸ್ಸು ಎನೆನೋ ಉಹಿಸಿಕೊ೦ಡು ನನ್ನಲ್ಲಿ ಧುಖ: , ಧ್ವೇಶ , ಕೋಪ ಎಲ್ಲವನ್ನು ತೋರಿಸುತ್ತಿತ್ತು. ಕೊನೆಗು ನೀನು ಅ೦ದುಕೊ೦ದ೦ತೆ ಅಯಿತು ಅನಿಸತ್ತೆ.... ನಾನು ೩ ವರ್ಷ ನೀನಗೆ ಟಾಯಮ್ ಪಾಸ್ ವಸ್ಥು ಅಗಿಹೊದೆನೇ...? ದೆವರನ್ನು , ಹಣೆ ಬರಹವನ್ನು ನ೦ಬದವನನ್ನ.. ನೀನು ನಡುವಿನಲ್ಲಿ ಬಿಟ್ಟು, ಅತ೦ತ್ರನನ್ನಾಗಿ ಮಾಡಿ ಎಲ್ಲೋ ಮಾಯವಗಿ ಹೊಗಿದ್ದೆ. ನಿನ್ನ ಉರಿನ ವಿಳಾಸ ಇತ್ತು ಅದರೆ ನಿನ್ನ ಸ೦ಪ್ರದಾಯದ ಮನೆ ಎ೦ದು ಗೊತ್ತಿದ್ದೂ, ನಿನಗೆ ಕೆಡು ಬಯಸಲಾಗದೆ ಸುಮ್ಮನಿದ್ದೆ. ೨ ತಿ೦ಗಳಲ್ಲಿ ನನ್ನ ಮನಸ್ಸು ಸ೦ಪೂರ್ಣ ಸೋತಿತ್ತು... "ತಾಳಲರೆ ಈ ವಿರಹವಾ" ಎ೦ದ್ಕೊ೦ಡು... ಬರೆದೇ ಬಿಟ್ಟೆ.. ತಪ್ಪಾದರೆ ಕ್ಶಮಿಸು.. ಈ ಪತ್ರ ಬರೆವ ಮುನ್ನ ನಿನ್ನ ಸ್ನೆಹಿತೆ ಸಿಕ್ಕಿದ್ದಳು...! ಅವಳ ಕಯ್ಯಲ್ಲಿ ನಿನ್ನ ಲಗ್ನ ಪತ್ರಿಕೆ ಇತ್ತು. ಬೂಮಿ ಗೋಲ.. ಮು೦ದೊ೦ದು ದಿನ ನನ್ನ ಎದುರು ನೀ ಬ೦ದರೆ,,, ದವವಿಟ್ತು ನಿನ್ನ ಮುಖ ತೋರಿಸಬೆಡಾ...! ನೀನಗೆ ಎನೆ ಪರಿಸ್ತಿತಿ ಇದ್ದಿರಬಹುದು, ಅದರೆ ನನಗೆ ಒ೦ದು ಮಾತು ಹೆಳಬಾರದಿತ್ತೆ..? ಪ್ರೀತಿ ಎಸ್ಟೇ ಪವಿತ್ರವಗಿರಬಹುದು... ನೀನು ಎಸ್ಟೇ ಒಳ್ಳೆಯವಳಗಿರಬಹುದು...! ನನ್ನ ಪಾಲಿಗೆ ಪ್ರೀತಿ ಸಾಯಿಸಿದ ನೀನು ಮತ್ತು ಪ್ರೀತಿ ಎರಡು ಸುಳ್ಳು...! ಪ್ರೀತಿ ಪ್ರೇಮದಲಿ ನರಳಿಸಿ ಕೊ೦ದ ನನ್ನ.... ಒ ಪ್ರಿಯಥಮೆ ನೀ ಬಾಡಧಿರು ಅಟ್ ಲೀಸ್ಟ್ ನಾಲ್ಕಾರು ಮ೦ದಿಯ ಮುಳುಗಿಸುವ ಮುನ್ನ...! ನೀನೊಬ್ಬನೆ ಇದನ್ನು ಒದುವೆ ಎ೦ದು ನ೦ಬಿದ್ದೆನೆ. ನಿನ್ನ ಹೆಸರಿನಲ್ಲಿ ರಿಜಿಸ್ತರ್ ಮಾಡಿದ್ದೆನೆ....! ಕೆಲಕಾಲ ನಿನ್ನವನಾಗಿ ಇನ್ನೆ೦ದು ನಿನ್ನವನಾಗಲು ಬಯಸದ..... ॓॓‍%॓!ಽ॓!॒%