Monday, August 23, 2010

""ನಿನ್ನ ನೆನಪು" (ದಿನವಿಡಿ)


ಕೊರೆಯುವ ಚಳಿಯಲ್ಲಿ....
ಬಚ್ಚಲಮನೆ ವಲೆಯಲ್ಲಿ....
ಚಿಮ್ಮುವ ಬೆ೦ಕಿಯ ಕಿಡಿಯ೦ತೆ ನಿನ್ನ ನೆನಪು....!


ಬಚ್ಚಲಮನೆ ಕಲ್ಲಿನ ಮೇಲೆ ನಿ೦ತಾಗ....
ನಡುಗುವ ಮಯ್ಯುಜ್ಜುವಾಗ...
ಜನಿವಾರದ ಗ೦ಟಿನ೦ತೆ ನಿನ್ನ ನೆನಪು....!


ಮಡಿ ಉಟ್ಟು ಆಚಮನ ಮಾಡಿ,
ದೇವರ ಪೂಜೆಯಲ್ಲಿ....
ನಯ್ವೆದ್ಧ್ಯಕಿಟ್ತ ಅಕ್ಕಿ ಪಾಯಸದ೦ತೆ ನಿನ್ನ ನೆನಪು...!


ಕತ್ತಿ ಹಿಡಿದು ತೋಟಕ್ಕೆ ಹೊದರೆ,
ಬಾಳೆ ಗಿಡ ಕಡಿದು ಕೊನೆ ಇಳಿಸಿದರೆ...
ಕಯ್ಯ್ಗೆ ಬಡಿದ ಅ೦ಟ೦ತೆ ನಿನ್ನ ನೆನಪು...!


ಮನೆಗೆ ಬ೦ದು ಕವಳ ಹಾಕುವಾಗ,
ಅಡಗತ್ರಿಗೆ ಸಿಕ್ಕ ಅಡಿಕೆಯ೦ತೆ .....
ಸ೦ಜೆ ಕೊಟ್ಟಿಗೆಯಲ್ಲಿ ದನಗಳಿಗೆ ಹುಲ್ಲು ಕೊಟ್ಟು,
ಹಾಲು ಕರೆವಾಗ ಆಕಳ ಒದೆಯ೦ತೆ....
ರಾತ್ರಿ ಚಾಲಿ ಸೊಲಿದು ಅಳೆಯುವಾಗ...
ಮನೆಯಲ್ಲ ತು೦ಬಿದ ಧುಳಿನ೦ತೆ ನಿನ್ನ ನೆನಪು...!!


ದಾರಿಯಿರದ ಊರಿನಲ್ಲಿ
ನೀ ಬರುವ ದಾರಿ ಹುಡುಕಿ, ಸೋತ ನನಗೆ....
ದಿನವಿಡಿ ಕಾಡುವುದು..... ನಿನ್ನ ನೆನಪು..!!



ವಿನಯ್

3 comments:

  1. can I add something? dont mind pls

    holedadadali nadevaga kachchida umbula amele tanagi bidduhoda mele suriva nettarinante ninna ninapu...

    benadadali suttaduvaga kalige tagida torsanigeyante ninna nenapu...

    aata noduvaga horage jilebi-mirchi tinnuvaga teli bandu moogige badiyuva kolimotte amletina vasaneyante ninna nenapu...

    tannage malagiruvaga maimele hariva haale huladante ninna nenapu....

    ReplyDelete
  2. Good piece of poetry. Why can't you take a bit more care of your spelling?

    ReplyDelete
  3. super maga.........

    chauti habbadalli gatti chakkuli tinnuvaga
    hulukada hallu muridu hodante ninna nenapu..........
    How is that????????

    ReplyDelete